January17, 2026
Saturday, January 17, 2026
spot_img

CCL ಪಂದ್ಯ ಮುಗಿಸಿ ಬರುವಾಗ ರಸ್ತೆ ಅಪಘಾತ: ಮಾಜಿ ಸಚಿವ ರಾಜೂ ಗೌಡ ಪ್ರಾಣಾಪಾಯದಿಂದ ಪಾರು

ಹೊಸದಿಗಂತ ವರದಿ ಯಾದಗಿರಿ:

ಸಿಸಿಎಲ್ ಪಂದ್ಯ ಮುಗಿಸಿ ಹೈದರಾಬಾದ್‌ನಿಂದ ಯಾದಗಿರಿ ಮೂಲಕ ತಮ್ಮ ಊರಿಗೆ ಬರುತ್ತಿದ್ದ ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಗರದ ಗಂಜ್ ಪ್ರದೇಶದಲ್ಲಿ ಹೈವೈ ರಸ್ತೆಯಲ್ಲಿ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕಳೆದ ಶುಕ್ರವಾರ ತಡರಾತ್ರಿ ನಡೆದಿದೆ.

ನೆರೆಯ ವಿಶಾಖಪಟ್ಟಣದಿಂದ ಸೆಲೆಬ್ರಟಿ ಕ್ರಿಕೆಟ್ ಲೀಗ್ ಪಂದ್ಯ ಮುಗಿಸಿ ಹಿಂತಿರುವಾಗ ಅಪಘಾತ ಸಂಭವಿಸಿದೆ. ನಗರದ ಗಂಜ್ ಪ್ರದೇಶದ ಹೈವೈ ರಸ್ತೆಯಲ್ಲಿ ಟ್ರಕ್ ವೊಂದು ಇವರ ಕಾರಿಗೆ ಹಿಂದಿನಿಂದ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಾಜೂ ಗೌಡ ಅವರಿಗೆ ಅಲ್ಪಸ್ವಲ್ಪ ತರಚಿದ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ಪಡೆದು ವಾಪಸ್ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ತಿಳಿದುಬಂದಿದೆ.

Must Read

error: Content is protected !!