ಹೊಸದಿಗಂತ ವರದಿ ಪುತ್ತೂರು:
ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡಿಲು ಎ.ಪಿ.ಎಂ.ಸಿ. ರಸ್ತೆ ಕ್ರಾಸ್ ಬಳಿ ರಸ್ತೆಯ ಒಂದು ಪಾರ್ಶ್ವ ಕುಸಿದು ಜನರ ಓಡಾಟಕ್ಕೆ ಅಡ್ಡಿಯಾಗಿದ್ದ ಸಮಸ್ಯೆಗೆ ನಗರಸಭೆ ತುರ್ತು ಸ್ಪಂದನೆ ನೀಡಿದೆ.
ನಗರಸಭೆಯ ಜಲಸಿರಿ ಯೋಜನೆಯಡಿ ಪೈಪ್ಲೈನ್ ಹಾಕುವ ಕಾಮಗಾರಿಯಲ್ಲಿ ಹೊಂಡಕ್ಕೆ ಸರಿಯಾಗಿ ಮಣ್ಣು ತುಂಬಿಸದೆ ರಸ್ತೆ ಕುಸಿತ ಉಂಟಾಗಿತ್ತು. ಪಡಿಲು ಎ.ಪಿ.ಎಂ.ಸಿ. ರಿಕ್ಷಾ ಪಾರ್ಕ್ ಮಾಡುವ ಜಾಗ ಇದಾಗಿದ್ದು, ಇದರಿಂದ ರಿಕ್ಷಾ ನಿಲುಗಡೆಗೆ ತೀವ್ರ ಅಡಚಣೆ ಉಂಟಾಗಿತ್ತು.
ಇದೀಗ ನಗಸಭೆ ರಸ್ತೆ ಕುಸಿತ ಉಂಟಾಗಿರುವ ಸ್ಥಳಕ್ಕೆ ಕಲ್ಲು ತಂದು ಹಾಕಿದ್ದು, ಸಮಸ್ಯೆ ಬಗೆಹರಿಸಲು ನಗರಸಭೆ ತುರ್ತಾಗಿ ಸ್ಪಂದಿಸಿದೆ. ನಗರಸಭೆ ಮುಖ್ಯಾಧಿಕಾರಿ ಮಧು ಎಸ್. ಮನೋಹರ್ ಅವರು ಈ ಕುರಿತು ತುರ್ತು ಕ್ರಮ ಕೈಗೊಂಡಿದ್ದಾರೆ.