Wednesday, December 24, 2025

ಪ್ರಿಯಾಂಕಾ ಪ್ರಧಾನಿಯಾಗುವುದು ನಿಶ್ಚಿತ ಎಂದ ರಾಬರ್ಟ್: ರಾಹುಲ್ ಗಾಂಧಿ ಹಾದಿಗೆ ಮುಳ್ಳುವಾಗುವವರೇ ಸಹೋದರಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದ ಇಮ್ರಾನ್ ಮಸೂದ್ ,ಪ್ರಿಯಾಂಕ ಗಾಂಧಿ ವಾದ್ರಾ ಪರವಾಗಿ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ, ಇದೀಗ ಪತಿ ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ, ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗುತ್ತಿದೆ.

ಪ್ರಿಯಾಂಕ ಗಾಂಧಿಯ ಸಂಸದೀಯ ನಡವಳಿಕೆ ಕಳೆದ ಚಳಿಗಾಲದ ಅಧಿವೇಶನದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಎಲ್ಲಿ, ಆಡಳಿತ ಪಕ್ಷದ ಹುಳುಕನ್ನು ಎತ್ತಿ ಹಿಡಿಯಬೇಕು, ದೇಶದ ವಿಚಾರ ಚರ್ಚೆಯಾಗುವ ಯಾವರೀತಿ ಮಾತನಾಡಬೇಕು ಮುಂತಾದ ವಿಚಾರದಲ್ಲಿ ಸಂಸತ್ತಿನ ಗಮನ ಸೆಳೆದಿದ್ದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ದಿನ ಸಾಂಪ್ರದಾಯಿಕವಾಗಿ ನಡೆಯುವ, ಸ್ಪೀಕರ್ ಕಚೇರಿಯಲ್ಲಿ ಆಯೋಜಿಸಲಾಗುವ ಟೀಪಾರ್ಟಿಯಲ್ಲೂ ಪ್ರಿಯಾಂಕ ಗಾಂಧಿ ಭಾಗವಹಿಸಿದ್ದರು. ಸಾಮಾನ್ಯವಾಗಿ, ಕಾಂಗ್ರೆಸ್ ಈ ಚಹಾ ಕೂಟವನ್ನು ಬಹಿಷ್ಕರಿಸಿದ ಉದಾಹರಣೆಗಳೇ ಜಾಸ್ತಿಯಿದ್ದವು. ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಕದಲ್ಲೇ ಕೂತು ಪ್ರಿಯಾಂಕ ಗಾಂಧಿ ಕೂತು ಮಾತುಕತೆಯನ್ನು ನಡೆಸಿದ್ದರು.

ಪ್ರಿಯಾಂಕ ಅವರ ಉತ್ತಮ ಸಂಸದೀಯ ನಡೆಯ ವಿಚಾರ ಚರ್ಚೆಯಲ್ಲಿ ಇರುವಾಗಲೇ, ರಾಬರ್ಟ್ ವಾದ್ರಾ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ವಾದ್ರಾ ಹೇಳಿಕೆಯಿಂದ ಒಂದಂತೂ ಸ್ಪಷ್ಟವಾಗುತ್ತದೆ. ಅದೇನಂದರೆ, ಕಾಂಗ್ರೆಸ್ಸಿನವರು ರಾಹುಲ್ ಗಾಂಧಿಯ ಮೇಲೆ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ರಾಬರ್ಟ್ ವಾದ್ರಾ ಹೇಳಿದ್ದೇನು
ನನ್ನ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ದೇಶದಲ್ಲಿ ಬದಲಾವಣೆ ತರುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಅವರಲ್ಲಿದೆ, ಮುಂದಿನ ದಿನಗಳಲ್ಲಿ ಜನರು ಏನನ್ನು ಬಯಸುತ್ತಾರೋ ಅದು ಆಗುವುದು ನಿಶ್ಚಿತ. ಅಜ್ಜಿ ಇಂದಿರಾ ಗಾಂಧಿ ಅವರ ಎಲ್ಲಾ ಗುಣಗಳು ಅವರಲ್ಲಿದೆ ಎಂದು ವಾದ್ರಾ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು, ಬಾಂಗ್ಲಾದೇಶದಲ್ಲಿ ಹಿಂದು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುವಾಗ, ಪ್ರಿಯಾಂಕ ಗಾಂಧಿ ಅವರು ಇಂದಿರಾ ಗಾಂಧಿ ಅವರಂತೆ ಪ್ರಬಲ ಪ್ರಧಾನಿಯಾಗಬಲ್ಲರು ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಬರ್ಟ್ ವಾದ್ರಾ, ತಮ್ಮ ಪತ್ನಿಯ ಬಗ್ಗೆ ವಿಶ್ವಾಸದ ಮಾತನ್ನಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗುವುದು ಅನಿವಾರ್ಯ. ನನಗೂ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಒತ್ತಡ ಹೆಚ್ಚಾಗುತ್ತಿದೆ. ಆದರೆ, ದೇಶದ ಸದ್ಯದ ಅವಶ್ಯಕತೆಯನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾದ್ರಾ ಹೇಳಿದ್ದಾರೆ.

ವಾದ್ರಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮದೇ ಪಾರ್ಟಿಯಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

error: Content is protected !!