ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಬಳಿ ಬಂಡೆಕಲ್ಲು ಬ್ಲಾಸ್ಟ್ ಮಾಡುವಾಗ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಮೂವರು ಕಾರ್ಮಿಕರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಬ್ಲಾಸ್ಟ್ ವೇಳೆ ಬೃಹತ್ ಗಾತ್ರದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಟ್ರಾಕ್ಟರ್, ಹಿಟಾಚಿ ಜಖಂಗೊಂಡಿದೆ. ಅವಘಡ ವೇಳೆ ಮೂವರು ಕಾರ್ಮಿಕರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಬಂಡೆ ಕಲ್ಲಿನಡಿ ಏಸಿಲುಕಿದ್ದರಾ ಎಂಬ ಆತಂಕ ಹೆಚ್ಚಾಗಿದೆ. ಸುಮಾರು 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಂಜುನಾಥ್ ಎಂಬುವರಿಗೆ ಸೇರಿದ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಸ್ಥಳಕ್ಕೆ ಟೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಣ್ಮರೆಯಾಗಿರುವ ಕಾರ್ಮಿಕರಿಗಾಗಿ ಹುಡುಕಾಟ ನಡೆದಿದೆ.