ಏರ್ ಕ್ರ್ಯಾಶ್​ ಬಗ್ಗೆ ರಾಕಿಂಗ್ ಸ್ಟಾರ್ ಟ್ವೀಟ್: ದುಃಖದ ಕ್ಷಣದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ! ಭರವಸೆ ನೀಡಿದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಭೀಕರ ಅಪಘಾತ ಭಾರತವನ್ನೇ ಕಂಗಾಲು ಮಾಡಿದೆ. ಈ ಭಯಾನಕ ಘಟನೆಯ ಬೆನ್ನಲ್ಲೇ ದೇಶಾದ್ಯಂತ ಗಣ್ಯರಿಂದ ಸಂತಾಪಗಳ ಮಹಾಪೂರವೇ ಹರಿದುಬಂದಿದ್ದು, ರಾಕಿಂಗ್ ಸ್ಟಾರ್ ಯಶ್ ಕೂಡ ಈ ಕುರಿತು ಭಾವುಕ ಟ್ವೀಟ್ ಮಾಡಿದ್ದಾರೆ.

“ಇದು ಗ್ರಹಿಸಲಾಗದ ದುರಂತ. ಯಾವುದೇ ಪದಗಳು ನಿಜವಾಗಿಯೂ ದುಃಖಿತ ಕುಟುಂಬಗಳ ಈ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಯಾಣಿಕ, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನನ್ನ ಹೃದಯ ತುಂಬಿದ ಪ್ರಾರ್ಥನೆಗಳು. ಈ ದುಃಖದ ಕ್ಷಣದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ,” ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ ಸಹ ಈ ದುಃಖದಲ್ಲಿ ಭಾಗಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ, ಈ ದುರಂತ ಊಹಿಸಲಾಗದಷ್ಟು ಭೀಕರ. ಪ್ರಾಣ ಕಳೆದುಕೊಂಡ ಕುಟುಂಬದವರೊಂದಿಗೆ ನನ್ನ ಪ್ರಾರ್ಥನೆ ಇದೆ. ಈ ನಷ್ಟದ ಪ್ರಮಾಣವು ವಿನಾಶಕಾರಿಯಾಗಿದೆ ಎಂದು ಹೇಳಿದ್ದಾರೆ.

ಅಪಘಾತದ ಹಿಂದಿನ ನಿಖರ ಕಾರಣಗಳು ತನಿಖೆಯಿಂದ ಮಾತ್ರ ಹೊರಬರಲಿವೆ. ಆದರೆ ಈ ಘಟನೆಯು ದೇಶದಾದ್ಯಂತ ಭಾವುಕ ಪ್ರತಿಕ್ರಿಯೆ ಹುಟ್ಟುಹಾಕಿದ್ದು ನಿಜ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!