ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಕಿ ಭಾಯ್ ಈ ಬಾರಿನೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಆದರೆ ಬರ್ತ್ಡೇ ಟ್ರೀಟ್ ಎನ್ನುವಂತೆ ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಲಿದೆ.
39ನೇ ವಸಂತಕ್ಕೆ ನಟ ಯಶ್ ಅವರು ಕಾಲಿಟ್ಟಿದ್ದು ಯಾವುದೇ ಸಡಗರ, ಸಂಭ್ರಮಗಳನ್ನು ಮಾಡುತ್ತಿಲ್ಲ. ಟಾಕ್ಸಿಕ್ ಸಿನಿಮಾ ತಂಡದಿಂದ ಇಂದು 10:25ಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ. ಇದೇ ಫ್ಯಾನ್ಸ್ಗೆ ಹುಟ್ಟುಹಬ್ಬದ ಉಡುಗೊರೆಯಾಗಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಹೊಸ ಸಿನಿಮಾದ ಕೆಲಸಗಳಲ್ಲೇ ಯಶ್ ಪಾಲ್ಗೊಳ್ಳಲಿದ್ದಾರೆ. ಶೂಟಿಂಗ್ನಲ್ಲಿ ಬ್ಯುಸಿ ಇರುವ ಕಾರಣ ಅವರು ಬೆಂಗಳೂರು ನಿವಾಸದಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳು ಯಾವುದೇ ಫ್ಲೆಕ್ಸ್, ಬ್ಯಾನರ್ ಇಂತಹ ಯಾವುದೇ ಆಡಂಬರ ಮಾಡದೆ ನನ್ನ ಹಾಗೂ ಇತರರ ಮನಸಿಗೆ ನೋವು ಆಗದಂತೆ ನೀವು ಎಲ್ಲಿ ಇರುತ್ತೀರೋ ಅಲ್ಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿದರೆ ಅದಕ್ಕಿಂತ ನನಗೆ ಹುಟ್ಟುಹಬ್ಬದ ದೊಡ್ಡ ಗಿಫ್ಟ್ ಇಲ್ಲ. ಆದಷ್ಟು ಬೇಗ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಯಶ್ ಅವರು ಹೊಸ ವರ್ಷದ ದಿನವೇ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.