ಟೆಸ್ಟ್ ಕ್ರಿಕೆಟ್‌ಗೆ ರೋಹಿತ್, ಕೊಹ್ಲಿ ವಿದಾಯ: ಕೋಚ್ ಗೌತಮ್ ಗಂಭೀರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈ ಇಬ್ಬರು ಲೆಜೆಂಡಿ ಆಟಗಾರರ ಈ ನಿರ್ಧಾರವು ಇಡೀ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತು.

ಅಲ್ಲದೆ ರೋಹಿತ್, ಕೊಹ್ಲಿ ನಿವೃತ್ತಿ ಘೋಷಿಸಲು ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ ಕಾರಣ, ಇವರಿಬ್ಬರು ರೋಹಿತ್ ಮತ್ತು ಕೊಹ್ಲಿಗೆ ನಿವೃತ್ತಿ ಘೋಷಿಸುವಂತೆ ಒತ್ತಡ ಹೇರಿದ್ದರು ಎಂದು ವರದಿಯಾಗಿತ್ತು. ಇದೀಗ ಈ ಆರೋಪಗಳ ಬಗ್ಗೆ ಗೌತಮ್ ಗಂಭೀರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ನಿವೃತ್ತಿ ಆಟಗಾರನ ವೈಯಕ್ತಿಕ ನಿರ್ಧಾರವಾಗಿದ್ದು, ಈ ನಿರ್ಧಾರದ ಮೇಲೆ ಪ್ರಭಾವ ಬೀರಲು ಬೇರೆಯವರಿಗೆ ಯಾವುದೇ ಹಕ್ಕಿಲ್ಲ. ನೀವು ಯಾವಾಗ ಆಟವಾಡಲು ಪ್ರಾರಂಭಿಸುತ್ತೀರಿ ಮತ್ತು ಯಾವಾಗ ಮುಗಿಸಲು ಬಯಸುತ್ತೀರಿ ಎಂಬುದು ತುಂಬಾ ವೈಯಕ್ತಿಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಈ ಹಕ್ಕನ್ನು ಕಿತ್ತುಕ್ಕೊಳ್ಳುವ ಹಕ್ಕು ಇನ್ನೊಬ್ಬ ವ್ಯಕ್ತಿಗೆ ಇಲ್ಲ. ಅದು ಕೋಚ್ ಆಗಿರಲಿ, ಆಯ್ಕೆದಾರರಾಗಿರಲಿ, ಈ ದೇಶದಲ್ಲಿ ಯಾರೇ ಆಗಿರಲಿ, ಯಾವಾಗ ನಿವೃತ್ತಿ ಹೊಂದಬೇಕು ಮತ್ತು ಯಾವಾಗ ನಿವೃತ್ತಿ ಹೊಂದಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆದ್ದರಿಂದ ನಿವೃತ್ತಿ ನಿರ್ಧಾರ ಸಂಪೂರ್ಣವಾಗಿ ಆಟಗಾರರಿಗೆ ಬಿಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಅತ್ಯಂತ ಅನುಭವಿ ಮತ್ತು ಹಿರಿಯ ಆಟಗಾರರಲ್ಲಿ ಒಬ್ಬರು. ಇಂಗ್ಲೆಂಡ್‌ನಂತಹ ಕಠಿಣ ಪ್ರವಾಸಗಳಲ್ಲಿ ಆಡಿದ ಉತ್ತಮ ಅನುಭವ ಅವರಿಗೆ ಇತ್ತು. ಅವರ ನಿರ್ಗಮನ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ. ಈಗ ಗಂಭೀರ್ ಇಬ್ಬರೂ ಆಟಗಾರರಿಗೆ ಬದಲಿ ಆಟಗಾರರನ್ನು ಹುಡುಕಬೇಕಾಗಿದೆ. ಅಲ್ಲದೆ, ನಾಯಕನನ್ನು ನೇಮಿಸಬೇಕಾಗಿದ್ದು, ಇದು ದೊಡ್ಡ ಸವಾಲಿನ ಕೆಲಸವಾಗಿದೆ.

ಕೆಲವೊಮ್ಮೆ ಇದು ಕೆಲವು ಜನರು ತಮ್ಮ ಕೈಗಳನ್ನು ಮುಂದಕ್ಕೆ ಚಾಚಿ ನಾನು ಸಿದ್ಧ ಎಂದು ಹೇಳಲು ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲದಿದ್ದಾಗಲೂ ಈ ಪ್ರಶ್ನೆಯನ್ನು ನನಗೆ ಕೇಳಲಾಯಿತು. ನಾನು ನಿಖರವಾಗಿ ಅದೇ ಮಾತನ್ನು ಹೇಳಿದೆ, ಯಾರೊಬ್ಬರ ಅನುಪಸ್ಥಿತಿಯು ಇನ್ನೊಬ್ಬ ವ್ಯಕ್ತಿಗೆ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಅವಕಾಶವನ್ನು ನೀಡುತ್ತದೆ, ಆಶಾದಾಯಕವಾಗಿ ಅವರು ಕೂಡ ಆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!