ಸೋಶಿಯಲ್‌ ಮೀಡಿಯಾದಲ್ಲಿ ರೋಹಿತ್‌ ಶರ್ಮಾ ಫೋಟೊ ವೈರಲ್‌, ಕಡೆಗೂ ಪೋಸ್‌ಗೆ ಕಾರಣ ಬಿಚ್ಚಿಟ್ಟ ಹಿಟ್‌ಮ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ಗೆಲುವನ್ನು ಇಡೀ ಇಂಡಿಯಾ ಈಗಲೂ ಸೆಲೆಬ್ರೇಟ್‌ ಮಾಡುತ್ತಿದೆ.

ಈ ಮಧ್ಯೆ ಫೀಲ್ಡ್‌ನಲ್ಲಿ ರೋಹಿತ್‌ ಶರ್ಮಾ ಮಲಗಿಕೊಂಡು ಖುಷಿಪಟ್ಟ ಫೋಟೊ ಎಲ್ಲೆಡೆ ವೈರಲ್‌ ಆಗಿತ್ತು. ಈ ಪೋಸ್‌ ಯಾಕೆ ಎನ್ನುವ ಪ್ರಶ್ನೆಗಳು ಎದುರಾಗಿದ್ದವು. ಅದಕ್ಕೆ ಹಿಟ್‌ಮ್ಯಾನ್‌ ಟ್ವೀಟ್‌ ಮೂಲಕ ಉತ್ತರ ನೀಡಿದ್ದಾರೆ.

ನನಗೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಲು ಸೂಕ್ತ ಪದಗಳು ಸಿಗುತ್ತಿಲ್ಲ. ಆದರೂ ನಾನದನ್ನೂ ವ್ಯಕ್ತಪಡಿಸಲು ಬಯಸುತ್ತೇನೆ. ಕೋಟ್ಯಂತರ ಟೀಂ ಇಂಡಿಯಾ ಆಭಿಮಾನಿಗಳ ಕನಸು ನನಸಾದ ಆ ಸಂಭ್ರಮದಲ್ಲಿ ಹಾಗೆ ತೇಲಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!