ಕ್ರಿಕೆಟಿಗ ಶಮಿ ವಿರುದ್ಧ ‘ರೋಜಾ’ ಟೀಕೆ: ಡೋಂಟ್ ವರಿ ನಿಮ್ಮ ಆಟ ನೀವು ಆಡಿ ಎಂದ ಅಖ್ತರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಫೈನಲ್ ಗೆ ಎಂಟ್ರಿಕೊಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಇದರ ನಡುವೆ ರಂಜಾನ್ ತಿಂಗಳ ರೋಜಾ (ಉಪವಾಸ) ಆಚರಿಸದಿದ್ದಕ್ಕಾಗಿ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ತೀವ್ರ ಟೀಕೆಗೆ ವ್ಯಕ್ತವಾಗುತ್ತಿದೆ.

ಮಂಗಳವಾರ ದುಬೈನಲ್ಲಿ ನಡೆದ ಪಂದ್ಯದ ವೇಳೆ ಮೊಹಮ್ಮದ್ ಶಮಿ ಎನರ್ಜಿ ಡ್ರಿಂಕ್ ಸೇವಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಇಸ್ಲಾಮಿಕ್ ಪವಿತ್ರ ತಿಂಗಳ ರಂಜಾನ್‌ನಲ್ಲಿ ಉಪವಾಸ ಮಾಡದ ಶಮಿ ಕ್ರಿಮಿನಲ್ಎಂದಿದ್ದರು.

ಆದ್ರೆ ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ಮೊಹಮ್ಮದ್ ಶಮಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಎಲ್ಲಾ ಟೀಕೆಗಳನ್ನು ನಿರ್ಲಕ್ಷಿಸಿ , ಶಮಿ ಸಾಹೇಬ್, ದುಬೈನ ಕ್ರಿಕೆಟ್ ಮೈದಾನದಲ್ಲಿ ಬಿರು ಬಿಸಿಲಿನಲ್ಲಿ ನೀವು ನೀರು ಕುಡಿಯುವುದಕ್ಕೆ ಯಾವುದೇ ತೊಂದರೆಯನ್ನುಂಟುಮಾಡುವ ಧರ್ಮಾಂದ ಮುರ್ಖರ ಬಗ್ಗೆ ತಲೆಕೆಡಿಸಿಕೊಡಬೇಡಿ ಎಂದಿದ್ದಾರೆ

ಹೀಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜಾವೇದ್, ಇದು ಅವರಿಗೆ ಸಂಬಂಧಿಸಿದ ವಿಷಯವಲ್ಲಾ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡುತ್ತಿರುವ ಮಹಾನ್ ಭಾರತೀಯ ತಂಡದಲ್ಲಿ ನೀವು ಒಬ್ಬರು, ನಿಮಗೆ ಮತ್ತು ನಮ್ಮ ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!