ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಯೋಪಿಕ್ಗಳು ಹೆಚ್ಚು ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಈ ಬಾರಿ ಬರುತ್ತಿರುವ ಬಯೋಪಿಕ್ ಒಂದು ಕುಟುಂಬಕ್ಕೆ ಸಂಬಂಧಿಸಿದೆ. ಬಾಲಿವುಡ್ನ ಅನೇಕ ಕುಟುಂಬಗಳು ತಲೆಮಾರುಗಳಿಂದ ಚಿತ್ರರಂಗದಲ್ಲಿವೆ. ಹೃತಿಕ್ ರೋಷನ್ ಫ್ಯಾಮಿಲಿ ಕೂಡಾ ಅಂಥವರಲ್ಲಿ ಒಬ್ಬರು. ಈ ಕುಟುಂಬದ ಬಯೋಪಿಕ್ ಶೀಘ್ರದಲ್ಲೇ ತೆರೆ ಕಾಣಲಿದೆ.
ಹೃತಿಕ್ ರೋಷನ್ ಅವರ ಅಜ್ಜ ರೋಷನ್ ಲಾಲ್ ಸಂಗೀತ ನಿರ್ದೇಶಕರಾಗಿ ಬಾಲಿವುಡ್ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಸ್ಟಾರ್ ಸಂಗೀತ ನಿರ್ದೇಶಕರ ಸ್ಥಾನಕ್ಕೆ ಏರಿದರು. ರೋಷನ್ ಲಾಲ್ ಅವರ ಪತ್ನಿ ಇರಾ ಕೂಡ ಜನಪ್ರಿಯ ಬಂಗಾಳಿ ಗಾಯಕಿ. ರೋಷನ್ ಲಾಲ್ ಅವರ ಹಿರಿಯ ಪುತ್ರ ರಾಕೇಶ್ ರೋಷನ್ ಬಾಲಿವುಡ್ನಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಚಿರಪರಿಚಿತರಾಗಿದ್ದಾರೆ. ರಾಕೇಶ್ ರೋಷನ್ ಪತ್ನಿ ಪಿಂಕಿ ರೋಷನ್ ನಿರ್ಮಾಪಕಿಯಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ರಾಕೇಶ್ ರೋಷನ್ ಪುತ್ರ ಹೃತಿಕ್ ರೋಷನ್ ಈಗ ಬಾಲಿವುಡ್ ನಲ್ಲಿ ಸ್ಟಾರ್ ಹೀರೋ. ಮಗಳು ಸುನೈನಾ ರೋಷನ್ ಸಹ ನಿರ್ಮಾಪಕಿಯಾಗಿದ್ದಾರೆ.
ರೋಷನ್ ಲಾಲ್ನಿಂದ ಹಿಡಿದು ಇಡೀ ಕುಟುಂಬವೇ ಚಿತ್ರರಂಗದಲ್ಲಿದೆ. ಮೂರು ತಲೆಮಾರುಗಳಿಂದ ಬಾಲಿವುಡ್ಗೆ ಸೇವೆ ಸಲ್ಲಿಸುತ್ತಿರುವ ಈ ರೋಷನ್ ಕುಟುಂಬದ ಬಗ್ಗೆ ಈಗ ಬಯೋಪಿಕ್ ಬರುತ್ತಿದೆ.
ಶಶಿ ರಂಜನ್ ನಿರ್ದೇಶನದ ಮತ್ತು ರಾಕೇಶ್ ರೋಷನ್ ನಿರ್ಮಾಣದ ಈ ಬಯೋಪಿಕ್ ರೋಷನ್ ಕುಟುಂಬವನ್ನು ಆಧರಿಸಿದೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ವರದಿಯಾಗಿದೆ. ಇಡೀ ರೋಷನ್ ಫ್ಯಾಮಿಲಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಹಾಗೂ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ.