ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೊಂದು ಇದ್ದರೆ ಸಾಕು, ರೊಟ್ಟಿ, ಚಪಾತಿಯನ್ನು ಒಂದೆರಡು ಹೆಚ್ಚೇ ತಿನ್ನಬಹುದು!. ಅಂತಹ ಅದ್ಭುತ ರುಚಿಯ, ಬಾಯಲ್ಲಿ ನೀರೂರಿಸುವ ಬದನೆಕಾಯಿ ಮಸಾಲಾ ಕರ್ರಿ ಇದು!. ಈ ಕರ್ರಿ ಹೇಗೆ ಮಾಡೋದು ನೋಡೋಣ ಬನ್ನಿ…
ಹೀಗೆ ಮಾಡಿ ಮಸಾಲಾ ಕರ್ರಿ. ಒಂದು ದೊಡ್ಡ ಗಾತ್ರದ ಟೊಮೆಟೋ ಹಣ್ಣು, ಒಂದು ಈರುಳ್ಳಿ, ಅರ್ಧ ತುಂಡು ಹಸಿಶುಂಠಿ, ಎಂಟೆಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಮಿಕ್ಸಿಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ.
ಒಂದು ಪ್ಯಾನ್‌ಗೆ ನಾಲ್ಕು ಚಮಚ ಶುದ್ಧ ತೆಂಗಿನೆಣ್ಣೆ ಹಾಕಿ. ಸಾಸಿವೆ, ಕಾಲು ಟೀ ಸ್ಪೂನ್ ಜೀರಿಗೆ, ಬೇವಿನೆಲೆ, ಇಂಗು, ಸಣ್ಣಗಾತ್ರದ ನೀರುಳ್ಳಿ ಹೆಚ್ಚಿಟ್ಟುಕೊಂಡು ಸೇರಿಸಿ ಫ್ರೈ ಮಾಡಿ. ಪರಿಮಳ ಸೂಸುತ್ತಿದ್ದಂತೆಯೇ ರುಬ್ಬಿಟ್ಟುಕೊಂಡ ಪೇಸ್ಟ್ ಹಾಕಿ ಚೆನ್ನಾಗಿ ಗೊಟಾಯಿಸಿ. 4 ಸಣ್ಣ ಗಾತ್ರದ ಬದನೆಕಾಯಿಯನ್ನು ಎರಡು ಭಾಗವಾಗಿ ತುಂಡುಮಾಡಿ 2 ನಿಮಿಷ ಫ್ರೈ ಮಾಡಿ. 1ಚಮಚ ಕೆಂಪು ಮೆಣಸಿನ ಪುಡಿ,1/2ಚಮಚ ಅರಸಿಣ ಪುಡಿ,1/2ಚಮಚ ಗರಂ ಮಸಾಲ, 1/2 ಗ್ಲಾಸ್ ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ 3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ 1/2ಕಪ್ ತರಿತರಿಯಾಗಿ ರುಬ್ಬಿದ ಶೇಂಗಾ ಪುಡಿ ಹಾಕಿ ಮಿಕ್ಸ್ ಮಾಡಿ 2ನಿಮಿಷ ಬೇಯಿಸಿ, ಕೊತ್ತಂಬರಿ ಸೊಪ್ಪು ಉದುರಿಸಿ. ಬಿಸಿ ಬಿಸಿಯಾದ ಬದನೆಕಾಯಿ ಕರ್ರಿ ಚಪಾತಿ ಅಥವಾ ಅಕ್ಕಿರೊಟ್ಟಿಯೊಂದಿಗೆ ಸೂಪರ್!