ಹೊಸದಿಗಂತ ವರದಿ ಬೀದರ್ :
ಜಿಲ್ಲೆಯನ್ನು ಅಪರಾಧ ಮುಕ್ತಗೊಳಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ರೌಡಿ ಪ್ರತಿಬಂಧಕ ಪಡೆ ರಚಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಹೇಳಿದರು.
ಸೋಮವಾರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಚಟುವಟಿಕೆಗಳನ್ನು ನಿಯಂತ್ರಿಸಲು ಈಗಾಗಲೇ ಶಕ್ತಿ ಪಡೆ ಕಾರ್ಯಪ್ರವೃತ್ತವಾಗಿದ್ದು, ಅದರೊಂದಿಗೆ ರೌಡಿ ಪ್ರತಿಬಂಧಕ ಪಡೆ ಕೈಜೊಡಿಸಲಿದೆ. ಈ ಪಡೆಯಲ್ಲಿ ತಲಾ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇತರೆ ಸಿಬ್ಬಂದಿಗಳು ಇರಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ರೌಡಿ ಶೀಟರ್‌ನಲ್ಲಿ ಗುರುತಿಸಿರುವ ಅನೇಕರು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುತ್ತಿದ್ದು, ಅಂತಹವರ ವಿರುದ್ದ ಪ್ರಕರಣಗಳನ್ನು ಕೈಬಿಡಲಾಗಿದೆ ಆದರೆ ಈ ಶಾಂತಿ ಭಂಗವನ್ನುಂಟು ಮಾಡುವ ದುಷ್ಠ ಶಕ್ತಿಗಳು ಯಾರೆ ಇದ್ದರು ಅಂತಹವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂದು ಹೇಳಿದರು.
ಒಟ್ಟಾರೆ ಈ ಶರಣರ ನಾಡು ಶಾಂತವಾಗಿರಲು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕರ್ತವ್ಯದಲ್ಲಿರುವ 1732 ಪೊಲೀಸ್‌ರೊಂದಿಗೆ ಕೈಜೊಡಿಸಬೇಕೆಂದು ಹೇಳಿದರು.
ಈ ಸಂದರ್ಭಧಲ್ಲಿ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ, ಎಲ್ಲಾ ಡಿ.ವೈ.ಎಸ್.ಪಿ.ಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.