ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 118 ಕೋಟಿ ರೂಪಾಯಿ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ಎಂಟು ಬಿಬಿಎಂಪಿ ಎಂಜಿನಿಯರ್‌ಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಹಗರಣದ ಸಂಪೂರ್ಣ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾನ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಆರ್‌ಆರ್ ನಗರ ವಲಯದಲ್ಲಿ ಈ ಫೇಕ್ ಬಿಲ್ ಹಗರಣ ಕಂಡುಬಂದಿದ್ದು, ಸಂಸದ ಡಿ.ಕೆ. ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾಗಿತ್ತು.
ಸತೀಶ್, ದೊಡ್ಡಯ್ಯ,ಸಿದ್ದರಾಮಯ್ಯ,ಬಸವರಾಜ್ ,ಉಮೇಶ್ ,ವೆಂಕಟಲಕ್ಷ್ಮೀ, ಶ್ರೀನಿವಾಸ್, ಶ್ರೀತೇಜ್ರನ್ನು ಅಮಾನತು ಮಾಡಲಾಗಿದೆ.