October 7, 2026
Wednesday, October 7, 2026
spot_img

📈 | ಆತ್ಮನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಆತ್ಮನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು ಇಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭವಿಷ್ಯದ ಚಾಂಪಿಯನ್​ಗಳಿಗಾಗಿ 10 ಸಾವಿರ ಕೋಟಿ ರೂಪಾಯಿ ಅನುದಾನ, ಟೀಯರ್​​ 2 ಹಾಗೂ 3 ನಗರಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜತೆಗೆ ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು ನೀಡಲಿದ್ದೇವೆ. ಖಾದಿ ಮತ್ತು ಕರಕುಶಲ ವಸ್ತುಗಳಿಗಾಗಿ ಹೊಸ ಯೋಜನೆ ಘೋಷಣೆ ಮಾಡುತ್ತೇವೆ, ತರಬೇತಿ, ಕೌಶಲ್ಯ ಮತ್ತು ಉತ್ಪಾದನೆಯ ಗುಣಮಟ್ಟ ಸುಧಾರಣೆ ಹಾಗೂ ಜಾಗತಿಕ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್​ಗೆ ಕೇಂದ್ರ ನೆರವು ನೀಡುತ್ತದೆ ಎಂದಿದ್ದಾರೆ.

Must Read