ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅಕ್ಕಿ ಗಲಾಟೆ ಅಂತ್ಯ ಕಂಡಿದ್ದು, ಸಿಎಂ ಸಿದ್ದರಾಮಯ್ಯ ಐದು ಕೆಜಿ ಅಕ್ಕಿ ಬದಲಾಗಿ ಅದಕ್ಕೆ ಖರ್ಚಾಗುವ ಹಣವನ್ನು ನೀಡಲು ನಿರ್ಧರಿಸಿದ್ದಾರೆ.
ಕೆಜಿಗೆ 34 ರೂಪಾಯಿಯಂತೆ ತಿಂಗಳಿಗೆ 170 ರೂಪಾಯಿ ಬಿಪಿಎಲ್ ಕಾರ್ಡ್‌ದಾರರ ಖಾತೆಗಳಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಮಾರ್ಕೆಟ್‌ನಲ್ಲಿ 35 ರೂಪಾಯಿಗೆ ಅಕ್ಕಿ ಸಿಗೋದಿಲ್ಲ, ಕನಿಷ್ಟ 45 ರೂಪಾಯಿಯಾದ್ರೂ ಕೊಡಲೇಬೇಕು ಎಂದು ಬಿಜೆಪಿ ಪಟ್ಟು ಹಿಡಿದು ಕುಳಿತಿದೆ.
ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ಕೊಡ್ತೀವಿ ಎಂದಿದ್ದರು, ಕೇಂದ್ರದಿಂದ ಐದು ಕೆಜಿ ಅಕ್ಕಿ ಸಿಗುತ್ತದೆ. ಒಟ್ಟಾರೆ 15 ಕೆಜಿ ಅಕ್ಕಿಯನ್ನು ಸರ್ಕಾರ ಜನರಿಗೆ ನೀಡಬೇಕು ಆದರೆ 10 ಕೆಜಿ ಕೊಡಲೂ ಆಗುತ್ತಿಲ್ಲ. ಹಾಗಾಗಿ ಕೆಜಿಗೆ 45 ರೂಪಾಯಿ ಕೊಡಲೇಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.