March 28, 2026
Saturday, March 28, 2026
spot_img

ಶಂಕಿತ ಉಗ್ರ ಜುನೈದ್‌ ಅಹಮದ್‌ ಬಗ್ಗೆ ಸುಳಿವು ಕೊಟ್ಟವರಿಗೆ ಐದು ಲಕ್ಷ ರೂ. ಬಹುಮಾನ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೋಸ್ಟ್‌ ವಾಂಟೆಡ್‌ ಉಗ್ರ ಜುನೈದ್‌ ಅಹ್ಮದ್‌ ಬಗ್ಗೆ ಸುಳಿವು ನೀಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ.

ಕಳೆದ ಮೂರು ವರ್ಷಗಳಿಂದ ಲಷ್ಕರ್‌ ಎ ತೊಯ್ಬಾದ ಈ ಉಗ್ರನಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿದೆ. ಆದರೆ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಇದೀಗ ಪಬ್ಲಿಕ್‌ ಸಹಾಯಕ್ಕೆ ಎನ್‌ಐಎ ನಿರೀಕ್ಷಿಸಿದ್ದು, ಸುಳಿವು ಕೊಟ್ಟವರಿಗೆ ಐದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿದೆ.

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಅತಿ ಹೆಚ್ಚು ಜನ ಓಡಾಟ ನಡೆಸುತ್ತಾರೆ. ಇಲ್ಲಿನ ಪ್ರತಿ ಕಂಬಗಳಲ್ಲಿಯೂ ವಾಂಟೆಡ್‌ ಪೋಸ್ಟರ್ಸ್‌ ಅಂಟಿಸಲಾಗಿದೆ.

2023 ರಲ್ಲಿ ಸಿಸಿಬಿ ಪೊಲೀಸರು ಭೇದಿಸಿದ ಉಗ್ರ ಸಂಚಿನ ಪ್ರಕರಣದ ಪ್ರಮುಖ ರೂವಾರಿ ಜುನೈದ್ ಅಮಹ್ಮದ್. ಉಗ್ರ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನ ವಶಪಡಿಸಿಕೊಂಡ ಪ್ರಕರಣದಲ್ಲಿ ಬೇಕಾಗಿರುವ ಉಗ್ರನಾಗಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !