ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯಗಳಲ್ಲಿ ಸಾಗರ ವಲಯ ಮತ್ತು ಜಲಮಾರ್ಗಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಬಂದರು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆಗಳಲ್ಲಿ ಪ್ರಮುಖವಾಗಿ ಬಂದರು ವಿಸ್ತರಣೆ, ಕ್ರೂಸ್ ಪ್ರವಾಸೋದ್ಯಮ ಹೆಚ್ಚಳ ಹಾಗೂ ಸುಮಾರು 50 ಸಾವಿರ ಯುವಜನತೆಗೆ, ಸಾಗರ ಸಂಬಂಧಿ ಕಾರ್ಯಗಳಲ್ಲಿ ಉದ್ಯೋಗ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ, ಸಿಲ್ ಘಾಟ್, ನೇಮತಿ, ಬಿಸ್ವನಾಥ್ ಘಾಟ್ ಮತ್ತು ಗುಯ್ ಜನ್ ನಲ್ಲಿ, 300 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಪ್ರವಾಸೋದ್ಯಮ ಮತ್ತು ಸರಕು ಜಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.