ಹೊಸದಿಗಂತ ವರದಿ ಕಲಬುರಗಿ:
ಬಸ್ನಲ್ಲಿ ಸಂಚಾರದ ವೇಳೆ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 73,600 ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ ಟನೆ ಮೇ 12ರಂದು ನಗರದಲ್ಲಿ ನಡೆದಿದೆ. ಹಡಗಿಲ ಹಾರುತಿ ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಗಾಜರೆ ಚಿನ್ನಾಭರಣ ಕಳೆದುಕೊಂಡವರು.
ನರೋಣಾಕ್ಕೆ ಹೋಗಲು ಗ್ರಾಮದಿಂದ ಸೂಪರ್ ಮಾರ್ಕೆಟ್ ಬಂದಿದ್ದು, ಅಲ್ಲಿಂದ ಆಳಂದ ಚೆಕ್ ಪೋಸ್ಟ್ಗೆ ಹೋಗಲು ಸರ್ಕಾರಿ ಬಸ್ನಲ್ಲಿ ಹತ್ತಿದ್ದಾಗ ಕಳ್ಳತನ ನಡೆದಿದೆ. ಬ್ಯಾಗ್‌ನಲ್ಲಿದ್ದ ತಾಳಿ ಚೈನ್, ಕಿವಿಯೋಲೆ, ಮಕ್ಕಳ ಬೆಳ್ಳಿ ಕಡಗ, 600 ರೂ. ನಗದು ಹಣ ಕಳ್ಳತನವಾಗಿದೆ ಎಂದು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ