ಹೊಸದಿಗಂತ ವರದಿ, ಕಲಬುರಗಿ:
ಆರು ತಿಂಗಳಲ್ಲಿ ಜಿಲ್ಲೆಯಲ್ಲಿ (ನಗರ ಹೊರತುಪಡಿಸಿ) ನಾನಾ ಕಡೆ ನಡೆದ ಕಳ್ಳತನ ಸೇರಿ ದರೋಡೆ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 74,27,270 ರೂ. ಮೌಲ್ಯದ ನಾನಾ ವಸ್ತುಗಳನ್ನು ಅವುಗಳ ಮಾಲೀಕರಿಗೆ ಪೊಲೀಸ್ ಇಲಾಖೆ ಶನಿವಾರ ಡಿಎಆರ್ ಮೈದಾನದಲ್ಲಿನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿತು.
2021ರ ನವೆಂಬರ್ 26ರಿಂದ 2022ರ 26 ಮೇ ವರಗೆ ಸುಲಿಗೆ, ಮನೆಕಳ್ಳತನ, ದರೋಡೆಯ ಸುಮಾರು 152 ಪ್ರಕರಣ ಜಿಲ್ಲೆಯ ನಾನಾ ತಾಲೂಕಗಳ ಠಾಣೆಗಳಲ್ಲಿದಾಖಲಾಗಿದ್ದವು. ಇದರಲ್ಲಿ 77 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿಸಿದ್ದು, ಆ ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು. ಶೇ.50ಕ್ಕಿಂತ ಹೆಚ್ಚಿನ ಪ್ರಕರಣಗಲ್ಲಿ ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಹಿತಿ ನೀಡಿದರು.
ಮಾಲೀಕರಿಗೆ ಮರಳಿಸಿದ ವಸ್ತುಗಳು
ಬಂಗಾರ 1124.37 ಗ್ರಾಂ 44,42,350ರೂ,
ಬೆಳ್ಳಿ 8481 ಗ್ರಾಂ 5,96,350 ರೂ,
ಜಿಯೋ ಕಂಪನಿ ರೂಟರ್ 1,20,000ರೂ,
1 ಕ್ರೂಸರ್ ವಾಹನ 1,20,000 ರೂ, ಎರಡು ಟೆಕ್ಷ್ಮೋ ಕಂಪನಿಯ ಮೊಟಾರ 52,400ರೂ, ಎರಡು ಟ್ರ್ಯಾಕ್ಟರ್ ಟ್ರ್ಯಾಲಿಗಳು 1,70,000ರೂ, 22 ಸ್ಯಾಮ್ಸಂಗ್ ಟ್ಯಾಬ್ 1,49,000ರೂ, 10 ಮೊಬೈಲ್ 1,16,350ರೂ, 34 ಮೋಟಾರ್ ಸೈಕಲಗಳು 11,05,000ರೂ, 9 ಸ್ಟಿಲ್ ಪ್ಲೇಟ್ 81,000ರೂ, 10 ಫೀಟ್ ಪಿವಿಸಿ ಪೈಪ್ 84,000ರೂ, 2 ಎತ್ತುಗಳು 85,000ರೂ, 4 ಕುರಿಗಳು 40,000ರೂ, 780 ಲೀಟರ್ ಟಿಸಿ ಆಯಿಲ್ 4,400ರೂ, 100 ಲೀಟರ್ ಡಿಸೇಲ್ 10,000ರೂ, 1 ತಾಮ್ರದ ಖಳಸಿ 3,000ರೂ, ನಗದು ಹಣ 3,32,520ರೂ ಸೇರಿದಂತೆ ಒಟ್ಟು 74,27,270 ಮೌಲ್ಯದ ವಸ್ತುಗಳನ್ನು ಹಿಂತಿರುಗಿಸಲಾಗಿದೆ.