ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ದಿನದಲ್ಲಿ ಬರೋಬ್ಬರಿ 9,055 ಕೋಟಿ ರೂಪಾಯಿ ಆದಾಯ ದಾಖಲಿಸುವ ಮೂಲಕ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶನಿವಾರ ತನ್ನ ದೈನಂದಿನ ಆದಾಯದ ಸಾರ್ವಕಾಲಿಕ ದಾಖಲೆ ಬರೆದಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಸಿಎಂಡಿ, ಇದು ಆಡಳಿತ ಮಂಡಳಿ ಹಾಗೂ ನೌಕರರ ಸಂಘಟಿತ ಪ್ರಯತ್ನದ ಫಲ ಎಂದಿದ್ದಾರೆ. ಹೆಚ್ಚಿನ ಬಸ್ ವ್ಯವಸೆ, ಆಫ್ ರೋಡ್ ದರ ಇಳಿಕೆ, ಹೆಚ್ಚುವರಿ ಟ್ರಿಪ್, ಶಬರಿಮಲೆಗೆ ಸೇವೆ ಇವೇ ಮೊದಲಾದವುಗಲಿಂದ ಸಂಸ್ಥೆ ಈ ಸಾಧನೆ ದಾಖಲಿಸಿದೆ.
ದಿನಂಪ್ರತಿ 10 ಕೋಟಿ ಆದಾಯದ ಗುರಿ ಹೊಂದಿರುವ ಸಂಸ್ಥೆ, ಈ ಹಿಂದೆ ಡಿ.11 ರಂದು 9.03 ಕೋಟಿ ರೂಪಾಯಿ ಆದಾಯ ಗಳಿಸಿತ್ತು.