ಹೊಸದಿಗಂತ ವರದಿ,ಅಂಕೋಲಾ :
ರಾಷ್ಟೀಯ ಸ್ವಯಂಸೇವಕ ಸಂಘ ಅಂಕೋಲಾ ಘಟಕವು ಗುಡ್ಡ ಕುಸಿತದಿಂದ ಬವಣೆಗೆ ಒಳಗಾದವರ ನೋವಿಗೆ ಸ್ಪಂದಿಸಲು ಧಾವಿಸಿದರು.
ಗುರುವಾರ ಉಳುವರೆ ಗ್ರಾಮ ಸಂತ್ರಸ್ತರಿಗೆ ಅವಶ್ಯಕ ಸಾಮಗ್ರಿಗಳಾದ ಚಾಪೆ, ಬೆಡ್ಶಿಟ್, ಚಾದರ್, ಉಡುಪಗಳು, ತಿಂಡೀತಿನಿಸುಗಳು, ಕುಡಿಯುವ ನೀರು, ಫಿನ್ಯಲ್, ಬ್ಲೇಚಿಂಗ್ ಪೌಡರ್ ಹಾಗೂ ಔಷಗಳನ್ನು ವಿತರಿಸಲಾಯಿತು.
ವಿಭಾಗ ಪ್ರಚಾರಕ ಗಣೇಶ ತೆಕ್ಕಟ್ಟೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಂಕೋಲಾ ತಾಲೂಕ ಕಾರ್ಯವಾಹ ಪ್ರಸಾದ ಮಹಾಲೆ, ವೆಂಕಟೇಶ್ ಕಾಮತ, ಗಿರೀಶ ಶೆಟ್ಟಿ, ಶ್ರೀಧರ್ ನಾಗರಕಟ್ಟೆ, ನಾಗರಾಜ ಶೆಟ್ಟಿ,ಕುಮಾರ ನಾಯ್ಕ್, ಗಣೇಶ ನಾಯ್ಕ್, ಸಂತೋಷ ರಾಯ್ಕರ, ಗೋವಿಂದ ಗೌಡ, ಲಂಬೋಧರ್ ಗೌಡ ಹಾಗೂ ಭಾಸ್ಕರ ರಾಯ್ಕರ ಮತ್ತಿತರರು ಈ ಸೇವಾ ಕಾರ್ಯದಲ್ಲಿ ಕೈ ಜೋಡಿಸಿದರು.
ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಸಂಭವಿಸಿದ ಸುನಾಮಿ ಸದೃಶ್ಯ ಸ್ಥಿತಿಯಿಂದ ನದಿ ಇನ್ನೊಂದ ತಡದ ಉಳುವರೆ ಗ್ರಾಮದಲ್ಲಿ ವ್ಯಾಪಕ ಹಾಲಿಯಾಗಿದ್ದು ೧೫ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.