ಸಂಸತ್ತಿನಲ್ಲಿ ಮುಂದುವರಿದ ಗದ್ದಲ: ರಾಜ್ಯಸಭೆ ಜುಲೈ 28 ರವರೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಕ್ರವಾರ, ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆಗಳ ನಡುವೆಯೇ ರಾಜ್ಯಸಭೆಯ ಕಲಾಪವನ್ನು ಜುಲೈ 28 ರವರೆಗೆ ಮುಂದೂಡಲಾಯಿತು.

ಪ್ರತಿಭಟನೆಗಳು ತೀವ್ರಗೊಂಡಾಗ ಸಭಾಪತಿ ಸ್ಥಾನದಲ್ಲಿದ್ದ ಬಿಜೆಪಿ ಸಂಸದ ಘನಶ್ಯಾಮ್ ತಿವಾರಿ ಅವರು ಕಲಾಪವನ್ನು ಮುಂದೂಡುವುದಾಗಿ ಘೋಷಿಸಿದರು.

ನಟ ಮತ್ತು ಮಕ್ಕಳ್ ನೀಧಿ ಮೈಯಂ ಮುಖ್ಯಸ್ಥ ಕಮಲ್ ಹಾಸನ್ ತಮ್ಮ ಮಾತೃಭಾಷೆ ತಮಿಳಿನಲ್ಲಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಡಿಎಂಕೆಯ ರಜತಿ, ಎಸ್‌ಆರ್ ಶಿವಲಿಂಗಂ ಮತ್ತು ಪಿ ವಿಲ್ಸನ್ ಸಹ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಕಲಾಪ ಸ್ಥಗಿತಗೊಳಿಸುವ ನಿಯಮ 267 ರ ಸೂಚನೆಗಳನ್ನು ನಿರಾಕರಿಸುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ದಿನದ ಆರಂಭದಲ್ಲಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ಸದನದಲ್ಲಿ ಗದ್ದಲವನ್ನು ಉದ್ದೇಶಿಸಿ ಮಾತನಾಡಿದ ಉಪಸಭಾಪತಿ, “ನಿನ್ನೆ ಸಭ್ಯತೆಯ ಉಲ್ಲಂಘನೆಯಾಗಿದೆ; ಕೆಲವು ಸದಸ್ಯರು ತಮ್ಮ ನಿಗದಿತ ಸ್ಥಳಗಳಲ್ಲಿ ಇರಲಿಲ್ಲ. ಸಭಾಪತಿಯ ಅನುಮತಿಯೊಂದಿಗೆ ಮಾತನಾಡುತ್ತಿರುವ ಯಾವುದೇ ಸದಸ್ಯರಿಗೆ ನಿಯಮಗಳು ಅಡ್ಡಿಪಡಿಸುವುದನ್ನು ನಿಷೇಧಿಸುತ್ತವೆ. ಇದು ಸದನದ ಸವಲತ್ತು ಉಲ್ಲಂಘನೆಗೆ ಸಮಾನವಾಗಿದೆ.” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!