ಕೆಲಸ ಕೇಳಿಕೊಂಡು ಬಂದ ಯುವತಿ ಎದುರು ಅಸಭ್ಯ ವರ್ತನೆ: ಆಪ್‌ ಸಚಿವನ ರಾಜಿನಾಮೆಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಂಜಾಬ್‌ನಲ್ಲಿ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ ಅವರ ಪ್ರಕರಣಯೊಂದು ಹೊರಬಿದಿದ್ದು, ಕೆಲಸ ಕೇಳಿಕೊಂಡು ಬಂದಿದ್ದ ಯುವತಿ ಜತೆ ಪಂಜಾಬ್‌ ಸಚಿವ ಬಲ್ಕಾರ್‌ ಸಿಂಗ್‌ ಹಸ್ತಮೈಥುನ ಮಾಡಿಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ನಾಯಕ ತಜಿಂದರ್‌ ಬಗ್ಗಾ ಆರೋಪಿಸುವ ಜತೆಗೆ, ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ. ಇದು ಈಗ ಭಾರಿ ವೈರಲ್‌ ಆಗಿದೆ.

ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ತಜಿಂದರ್‌ ಬಗ್ಗಾ ಅವರು ಬಲ್ಕಾರ್‌ ಸಿಂಗ್‌ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಆಮ್‌ ಆದ್ಮಿ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ, ಗೌರವ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಆಪ್‌ ಸಚಿವ ಬಲ್ಕಾರ್‌ ಸಿಂಗ್‌ ಅವರು ಕೆಲಸ ಕೇಳಿಕೊಂಡು ಬಂದ 21 ವರ್ಷದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೆಲಸ ಕೊಡಿಸುವ ಆಸೆ ಹುಟ್ಟಿಸಿದ ಅವರು ವಿಡಿಯೊ ಕಾಲ್‌ ಮಾಡಿ ನಿನ್ನ ಬಟ್ಟೆ ಬಿಚ್ಚು ಎಂಬುದಾಗಿ ಒತ್ತಾಯಿಸಿದ್ದಾರೆ. ಅವರೂ ಯುವತಿಗೆ ಕಾಣುವಂತೆ ಹಸ್ತಮೈಥುನ ಮಾಡಿಕೊಂಡಿದ್ದಾರೆ’ ಎಂಬುದಾಗಿ ತಜಿಂದರ್‌ ಬಗ್ಗಾ ಆರೋಪಿಸಿದ್ದಾರೆ.

ಕರ್ತಾರ್‌ಪುರ ಸಾಹಿಬ್‌ ವಿಧಾನಸಭೆ ಕ್ಷೇತ್ರದ ಶಾಸಕ, ಸ್ಥಳೀಯ ಸಂಸ್ಥೆಗಳ ಸಚಿವ ಬಲ್ಕಾರ್‌ ಸಿಂಗ್‌ ಅವರನ್ನು ಮುಂದಿನ 24 ಗಂಟೆಗಳಲ್ಲಿಯೇ ವಜಾಗೊಳಿಸಬೇಕು. ಇಲ್ಲದಿದ್ದರೆ, ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಜನರು ಆಮ್‌ ಆದ್ಮಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಲ್ಕಾರ್‌ ಸಿಂಗ್‌ ವಿಡಿಯೊ ವೈರಲ್‌ ಆಗುತ್ತಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅವರು ಕೂಡ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಬಲ್ಕಾರ್‌ ಸಿಂಗ್‌ ಅವರು ಅನುಚಿತವಾಗಿ ವರ್ತಿಸುವ ವಿಡಿಯೊ ವೈರಲ್‌ ಆಗಿರುವ ಬಗ್ಗೆ ಶಿರೋಮಣಿ ಅಕಾಲಿ ದಳ ಹಾಗೂ ಕಾಂಗ್ರೆಸ್‌ ಟೀಕೆ ವ್ಯಕ್ತಪಡಿಸಿವೆ.ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಬಲ್ಕಾರ್‌ ಸಿಂಗ್‌, ಲಾಲ್‌ ಚಾಂದ್‌ ಕಟರುಚಾಕ್‌ ಅವರಂತಹ ನಾಚಿಕೆ ಇಲ್ಲದ ಸಚಿವರನ್ನು ರಕ್ಷಣೆ ಮಾಡುತ್ತಿರುವುದು ಖಂಡನೀಯ. ಕೂಡಲೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿವೆ. ಆದಾಗ್ಯೂ, ಬಲ್ಕಾರ್‌ ಸಿಂಗ್‌ ವಿರುದ್ಧ ಯಾವುದೇ ಯುವತಿಯು ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!