Monday, September 8, 2025

ಗಣೇಶ ವಿಸರ್ಜನೆ ವೇಳೆ ರೂಲ್ಸ್‌ ಬ್ರೇಕ್: 64 ಮಂದಿ ವಿರುದ್ಧ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿರಾಜಪೇಟೆ ಗಣೇಶ ವಿಸರ್ಜನೋತ್ಸವ ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ ಸಮಿತಿ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಇದನ್ನು ಒಟ್ಟು 16 ಸಮಿತಿಗಳ ಮಂಟಪಗಳಲ್ಲಿದ್ದ ಧ್ವನಿವರ್ಧಕಕ್ಕೆ ಸಂಬಂಧಿಸಿದ 64 ಮಂದಿಯ ವಿರುದ್ಧವೂ ಅನ್ವಯಿಸಿ ಕಲಂ 125, 285, 292, 36, 109 ಸೇರಿದಂತೆ ಕೆಪಿ ಕಾಯಿದೆ, 188 ಐಎಂವಿ ಕಾಯಿದೆಯಡಿಯೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ