ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿಯಂದು ಬಿಡುಗಡೆಯಾದ ‘ವಾರಿಸು’ ಚಿತ್ರ ಪ್ರೇಕ್ಷಕರ ಮನ ಸೆಳೆಯುವಲ್ಲಿ ವಿಫಲವಾಗಿದ್ದು, ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಚಿತ್ರವು ಅಭಿಮಾನಿಗಳನ್ನು ಆಕರ್ಷಿಸುವಲ್ಲಿ ಸೋತಿದೆ. ಇದರ ನಡುವೆ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಮಾತುಗಳು ಕಾಲಿವುಡ್ ನಲ್ಲಿ ಹರಿದಾಡುತ್ತಿವೆ. ಇವರಿಬ್ಬರ ಸುಂದರ ಬದುಕಿಗೆ ಸ್ಟಾರ್ ನಟಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ ಎಂಬ ಗಾಸಿಪ್ ಗಳು ಜೋರಾಗಿದೆ.
ಕಳೆದ ಕೆಲ ದಿನಗಳಿಂದ ಕೀರ್ತಿ ಅವರ ಮದುವೆ ಸುದ್ದಿ ಸದ್ದು ಮಾಡುತ್ತಿದೆ. ಕಾಲಿವುಡ್ ಸ್ಟಾರ್ ಹೀರೋ ವಿಜಯ್ ಜೊತೆ ಕೀರ್ತಿ ಅಫೇರ್ ಹೊಂದಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೀರ್ತಿ ಮತ್ತು ವಿಜಯ್ ಅವರ ಫೋಟೋಗಳನ್ನು ಅಕ್ಕಪಕ್ಕದಲ್ಲಿ ಇರಿಸಿ ಟ್ರೋಲ್ ಮಾಡುತ್ತಿದ್ದಾರೆ.
ಹೌದು, ಮಹಾನಟಿ ಕೀರ್ತಿ ಸುರೇಶ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ. ಅಭಿಮಾನಿಯನ್ನು ಪ್ರೀತಿಸಿ ಮದುವೆಯಾಗಿದ್ದ ನಟ ವಿಜಯ್ ಮದುವೆ ವಿಚ್ಛೇದನದಲ್ಲಿ ಅಂತ್ಯವಾಗಲಿದೆಯಾ? ವಿಜಯ್ ಪತ್ನಿ ಸಂಗೀತಾಗೆ ನ್ಯಾಯ ದೊರಕಿಸಲು ‘ಜಸ್ಟೀಸ್ ಫಾರ್ ಸಂಗೀತಾ’ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಮತ್ತೊಂದೆಡೆ, ಇತರರು ಕೀರ್ತಿ ಸುರೇಶ್ ಉದ್ಯಮಿಯನ್ನು ಮದುವೆಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ.
ಕೇರಳದಲ್ಲಿ ರೆಸಾರ್ಟ್‌ಗಳನ್ನು ಹೊಂದಿರುವ ಉದ್ಯಮಿಯೊಬ್ಬರನ್ನು ಆಕೆ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೀರ್ತಿ ಸುರೇಶ್ ಮತ್ತು ವಿಜಯ್ ಸ್ಪಷ್ಟಪಡಿಸಿಲ್ಲ. ಇನ್ನೊಂದು ವರದಿಯ ಪ್ರಕಾರ, ಸಂಗೀತಾ ವಿಜಯ್ ಜೊತೆ ಬದಲು ಮಗನೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ವರದಿಗಳೂ ಇವೆ.