ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಬೇಡಿಕೆ ಈಡೇರಿಸಪ್ಪಾ ಸ್ವಾಮಿ, ನಿನ್ನ ಬಳಿ ಬಂದು ಬಂಡೆಗೆ ತಲೆ ಚಚ್ಕೋತಿನಿ..
ಹೌದು, ವಿಚಿತ್ರ ಆಚರಣೆ ಎಂದು ಅನ್ನಿಸಬಹುದು ಆದರೆ ವಿಜಯಪುರದ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ಜಾತ್ರೆಯಲ್ಲಿ ಭಕ್ತಾದಿಗಳು ಹರಕೆ ತೀರೀಸೋದೇ ಹೀಗೆ..
ದೂರ ದೂರದಿಂದ ಓಡಿಬಂದು ಹಣೆಯನ್ನು ಕಲ್ಲಿನ ಬಂಡೆಗೆ ಕುಟ್ಟಿ ತಮ್ಮ ಹರಕೆಯನ್ನು ತೀರಿಸ್ತಾರೆ. ಹೀಗಾಗಿ ಇದನ್ನು ತಲೆ ಚಚ್ಚಿಕೊಳ್ಳೋ ಜಾತ್ರೆ ಎಂದೇ ಕರೆಯಲಾಗುತ್ತದೆ.
ಸೋಮೇಶ್ವರ ದೇವನಿಗೆ ಹರಸಿಕೊಂಡು ಮೂರು ಬಾರಿ ತಲೆ ಜಜ್ಜಿಕೊಂಡು ಹರಕೆ ತೀರಿಸಿ ಭಕ್ತರು ನೆಮ್ಮದಿ ಪಡೆಯುತ್ತಾರೆ.