ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ರಷ್ಯಾ ಸೇನೆಯ ದಾಳಿಗೆ ಇದುವರೆಗೆ ಉಕ್ರೇನ್ ನ ಮೂವರು ಮಕ್ಕಳು ಸಹಿತ 198 ಉಕ್ರೇನಿಯನ್ನರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ರಷ್ಯಾ ಉಕ್ರೇನ್ ಮೇಲಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ದಾಳಿಯನ್ನು ನಡೆಸುತ್ತಿದೆ. ಇದುವರೆಗೆ 3,500ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಉಕ್ರೇನ್ ಹೊಡೆದುರುಳಿಸಿರೋದಾಗಿ ತಿಳಿಸಿದೆ.ಜೊತೆಗೆ 102 ಯುದ್ಧ ಟ್ಯಾಂಕರ್, 8 ಹೆಲಿಕ್ಯಾಪ್ಟರ್, 536 ವಾಹನಗಳು ಉಕ್ರೇನ್ ಧ್ವಂಸ ಮಾಡಿರೋದಾಗಿ ಹೇಳಿಕೊಂಡಿದೆ.ಇದರ ಜೊತೆಗೆ 200 ರಷ್ಯಾ ಸೈನಿಕರನ್ನು ಬಂಧಿಸಿರೋದಾಗಿ ಹೇಳಿಕೊಂಡಿದೆ.
ಇತ್ತ ರಷ್ಯಾ ದಾಳಿಗೆ ಮೂವರು ಮಕ್ಕಳು ಸಹಿತ 198 ಉಕ್ರೇನಿಯನ್ನರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಇದುವರೆಗೆ 33 ಮಕ್ಕಳು ಸೇರಿದಂತೆ 1,115 ಮಂದಿ ಗಾಯಗೊಂಡಿರೋದಾಗಿ ಉಕ್ರೇನ್ ಆರೋಗ್ಯ ಇಲಾಖೆ ಅಧಿಕೃತವಾಗಿ ಸ್ಪಷ್ಟ ಪಡಿಸಿದೆ.