ಭಾರತದ ವಿನಂತಿಗೆ ಮಣಿದು ‘ಖಾರ್ಕಿವ್ ಬಾಂಬಿಂಗ್’ ತುಸು ಲೇಟ್ ಮಾಡಿತೇ ರಷ್ಯ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯುದ್ಧಸಂಬಂಧಿ ವಿಷಯಗಳನ್ನು ಕರಾರುವಾಕ್ ಆಗಿ ವರದಿ ಮಾಡುವ ಕೆಲ ಮಾಧ್ಯಮ ಮತ್ತು ಪತ್ರಕರ್ತರ ಮಾಹಿತಿಗಳನ್ನೇ ನಂಬುವುದಾದರೆ ಉಕ್ರೇನಿನ ಖಾರ್ಕಿವ್ ನಗರ ಇಂದು ರಾತ್ರಿ ಕಂಡುಕೇಳರಿಯದ ಬಾಂಬು ದಾಳಿಗೆ ನಲುಗಲಿದೆ!

ಖಾರ್ಕಿವ್ ಅನ್ನು ಸುತ್ತುವರಿದಿರುವ ರಷ್ಯ ಪಡೆಗಳು ಇನ್ನೂ ಸಂಪೂರ್ಣವಾಗಿ ದಾಳಿ ಮಾಡದಿರುವುದಕ್ಕೆ ಕಾರಣ ಭಾರತ ಎನ್ನಲಾಗುತ್ತಿದೆ.

“ಖಾರ್ಕಿವ್ ನಲ್ಲಿರುವ ಭಾರತೀಯರು ಹೊರಹೋಗುವುದಕ್ಕೆ ಅವಕಾಶ ಕೊಡಿ” ಹಾಗಂತ ರಷ್ಯದ ಜತೆ ನಿರಂತರ ಮಾತುಕತೆಯಲ್ಲಿರುವ ಭಾರತ ಒತ್ತಾಯ ಮಾಡಿದೆ. ಯುದ್ಧಭೂಮಿಯಲ್ಲಿ ಇಂಥ ವಿನಂತಿಗಳೆಲ್ಲ ಲೆಕ್ಕಕ್ಕೆ ಬರುವುದಿಲ್ಲ. ಆದರೂ ಭಾರತದ ಪ್ರಭಾವ ಮತ್ತು ಸ್ನೇಹಗಳಿಗೆ ಕಟ್ಟುಬಿದ್ದಿರುವ ರಷ್ಯ, ಖಾರ್ಕಿವ್ ಮೇಲೆ ತನ್ನೆಲ್ಲ ಶಕ್ತಿಪ್ರಯೋಗಿಸುವುದಕ್ಕೂ ಮೊದಲು ಮೂರೇ ಮೂರು ತಾಸುಗಳ ಬಿಡುವು ಕೊಡುವುದಾಗಿ ಹೇಳಿದೆ.

ರಕ್ಷಣಾ ವಿಷಯಗಳಲ್ಲಿ ಆಳ ಮೂಲಗಳನ್ನು ಹೊಂದಿರುವ ಭಾರತೀಯ ಪತ್ರಕರ್ತ ನಿತಿನ್ ಗೋಖಲೆ ಈ ಸಾಧ್ಯತೆಯನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ಹೀಗಾಗಿರಬಹುದು ಎಂಬುದಕ್ಕೆ ಇಂಬು ಕೊಡುವಂತೆ ಭಾರತ ಸರ್ಕಾರದ ಸೂಚನೆಯೂ ಹೊರಬಿದ್ದಿದೆ. ಮಂಗಳವಾರ ರಾತ್ರಿ 9.30ರ ಒಳಗೆ ಖಾರ್ಕಿವ್ ನಲ್ಲಿರುವ ಭಾರತೀಯರೆಲ್ಲ ಹತ್ತಿರದ ಪೆಸೊಕಿನ್, ಬಬಾಯೆ, ಬೆಜ್ಲಿದೊವ್ಕ ಪ್ರದೇಶಗಳಿಗೆ ತಲುಪಿಕೊಳ್ಳಬೇಕು ಅಂತ ಪ್ರಕಟಣೆ ಹೊರಬಿದ್ದಿದೆ.

ಅಲ್ಲದೇ ಹೀಗೇ ಹೆಸರಿಸುತ್ತಿರುವ ಸ್ಥಳ, ಸಮಯ ಎಲ್ಲವೂ ರಷ್ಯನ್ನರು ನಮಗೆ ನೀಡಿದ ಮಾಹಿತಿ ಅಂತ ಪತ್ರಿಕಾಗೋಷ್ಟಿಯಲ್ಲಿ ಭಾರತದ ವಿದೇಶ ವ್ಯವಹಾರಗಳ ವಕ್ತಾರರೇ ಹೇಳಿದ್ದಾರೆ.

ಇಷ್ಟಾಗಿಯೂ ಖಾರ್ಕಿವ್ ನಲ್ಲಿರುವ ಭಾರತೀಯರೆಲ್ಲ ಇಷ್ಟು ಶೀಘ್ರದಲ್ಲಿ ಸ್ಥಳಾಂತರಗೊಳ್ಳುವುದು ಅನುಮಾನವೇ. ಏಕೆಂದರೆ ಒಂದುಮಟ್ಟದ ಶೆಲ್ಲಿಂಗ್ ಈಗಲೂ ಆಗುತ್ತಿದೆ. ಆದರೆ ಒಂದು ಸಮಯದ ನಂತರ ತಾನು ನಿಧಾನಿಸುವುದು ಸಾಧ್ಯವಿಲ್ಲ ಎಂದು ರಷ್ಯ ಹೇಳಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!