ಭೀಕರ ಸುನಾಮಿಗೆ ನಲುಗಿದ ರಷ್ಯಾ: ಸುರಕ್ಷಿತ ಸ್ಥಳಗಳಿಗೆ ಎರಡು ಸಾವಿರ ಜನರ ಸ್ಥಳಾಂತರ

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ರಷ್ಯಾದ ಕರಾವಳಿ ಭಾಗ ಸುನಾಮಿ ಅಬ್ಬರಕ್ಕೆ ನಲುಗಿದ್ದು, ಸುನಾಮಿ ಪೀಡಿತ ಬಂದರು ಪಟ್ಟಣದಲ್ಲಿನ ಕಟ್ಟಡಗಳು ಸಮುದ್ರದ ನೀರಿನಲ್ಲಿ ಮುಳುಗಿದ್ದು, ಸುಮಾರು 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಷ್ಯಾದ ಸೆವೆರೊ- ಕುರಿಲ್ಸ್ ಕ್ ನಲ್ಲಿ ಸುನಾಮಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 1952ರ ಬಳಿಕ ಅತ್ಯಂತ ಪ್ರಬಲವಾದ ಭೂಕಂಪ ರಷ್ಯಾದ ಪೂರ್ವ ಭಾಗದ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ ಆಗ್ನೇಯದಲ್ಲಿ ಸುಮಾರು 125 ಕಿ.ಮೀ ದೂರದಲ್ಲಿ ನಡೆದಿದೆ. ಸುಮಾರು 19.3 ಕಿ.ಮೀ ಆಳದಲ್ಲಿ ಭೂಕಂಪನ ಉಂಟಾಗಿದ್ದು, ಇದರಿಂದ ಕಮ್ಚಟ್ಕಾ ಕರಾವಳಿಯ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ ವರೆಗಿನ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ಪ್ರಾದೇಶಿಕ ಭೂಕಂಪನ ಮೇಲ್ವಿಚಾರಣಾ ಸೇವೆ ತಿಳಿಸಿದೆ.

ಕಮ್ಚಟ್ಕಾ ವಿರಳ ಜನಸಂಖ್ಯೆ ಇರುವ ದ್ವೀಪವಾಗಿದ್ದು, ಇಲ್ಲಿ ಭೂಕಂಪನ ಸಂಭವಿಸಿದ ಬಳಿಕ ಸೆವೆರೊ- ಕುರಿಲ್ಸ್ ಕ್ ನಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಭೂಭೌತಿಕ ಸಮೀಕ್ಷೆ ತಿಳಿಸಿದೆ.

ಸುನಾಮಿ ಪೀಡಿತ ಬಂದರು ಪಟ್ಟಣದಲ್ಲಿನ ಕಟ್ಟಡಗಳು ಸಮುದ್ರದ ನೀರಿನಲ್ಲಿ ಮುಳುಗಿದ್ದು, ಇಲ್ಲಿನ ಸುಮಾರು 2,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, ಸೆವೆರೊ-ಕುರಿಲ್ಸ್ ಕ್ ಬಂದರು ಪಟ್ಟಣದ ಕೆಲವು ಭಾಗಗಳನ್ನು ಸುನಾಮಿಯಿಂದ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕಂಪದಿಂದ ಹಲವಾರು ಜನರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಗಂಭೀರ ಪ್ರಕರಣಗಳಿಲ್ಲ ಎಂದು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!