ಉಕ್ರೇನ್ ಯುದ್ಧ ಟೀಕಿಸುವ ನಾಗರಿಕರಿಂದ ಪಾಸ್‌ಪೋರ್ಟ್‌ ಕಿತ್ತುಕೊಳ್ಳಲು ಮುಂದಾದ ರಷ್ಯಾ: ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಉಕ್ರೇನ್ ಯುದ್ಧವನ್ನು ಟೀಕಿಸುವ ನಾಗರಿಕರಿಂದ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಳ್ಳಲು ಕ್ರೆಮ್ಲಿನ್‌ಗೆ ಅನುಮತಿಸುವ ಮಸೂದೆ ರೂಪಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
“ರಷ್ಯಾದ ಸೈನ್ಯವನ್ನು ಟೀಕಿಸುವುದು, ನಕಲಿ ಸುದ್ದಿಗಳನ್ನು ಹರಡುವುದು ಮತ್ತು ಅನಪೇಕ್ಷಿತ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಕ್ರಮಗಳನ್ನು ತೀವ್ರ ಸ್ವರೂಪದ ಅಪರಾಧವೆಂದು ಪರಿಗಣಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ರಷ್ಯಾದ ಜನರ ನಡುವೆ ವೈಷಮ್ಯವನ್ನು ಬಿತ್ತುವ ಪ್ರಯತ್ನದಲ್ಲಿ ಅಮೆರಿಕ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಸುಳ್ಳು ಮಾಹಿತಿಯನ್ನು ಹರಡುತ್ತಿವೆ ಎಂದು ಕ್ರೆಮ್ಲಿನ್ ಅಧಿಕಾರಿಗಳು ಪದೇ ಪದೇ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ರಷ್ಯಾದ ಸಂಸತ್ತು, ಉಕ್ರೇನ್ ಯುದ್ಧವನ್ನು ಪ್ರತಿಭಟಿಸುವ ಮತ್ತು ರಷ್ಯಾದ ಸೈನ್ಯವನ್ನು ಟೀಕಿಸುವುದನ್ನು ಅಪರಾಧವೆಂದು ಪರಿಗಣಿಸುವ ಕಾನೂನುಗಳನ್ನು ತಂದಿತು.
ನಿಯಮಗಳನ್ನು ಉಲ್ಲಂಘಿಸುವವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!