ಚಂದ್ರನ ಮೊದಲ ಚಿತ್ರ ಕಳುಹಿಸಿದ ರಷ್ಯಾದ ಲೂನಾ-25!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಚಂದ್ರನ ಅಂಗಳಕ್ಕೆ ಜಿಗಿದ ಬೆನ್ನಲ್ಲೇ ರಷ್ಯಾ (Russia) ಕೂಡ ಲೂನಾ-25 (Luna-25) ಅನ್ನು ಚಂದ್ರನ ಕಕ್ಷೆಗೆ ಕಳುಹಿಸಿದ್ದು, ಇದು ಚಂದ್ರನ ಮೇಲ್ಮೈನ (Moon Surface) ಸೆರೆಹಿಡಿದ ಮೊದಲ ಚಿತ್ರವನ್ನು ಕಳುಹಿಸಿದೆ.

ಈ ಕುರಿತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮಾಹಿತಿ ಹಂಚಿಕೊಂಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಝೀಮನ್ ಕುಳಿ ಚಿತ್ರವನ್ನು ತೆಗೆಯಲಾಗಿದೆ. ‘ಡಾರ್ಕ್ ಸೈಡ್’ ಎಂದೂ ಕರೆಯಲ್ಪಡುವ ಈ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಭೂಮಿಯ ನೋಟದಿಂದ ಶಾಶ್ವತವಾಗಿ ಮರೆಯಾಗಿದೆ.

ಸೋವಿಯತ್ ಒಕ್ಕೂಟದ ಲೂನಾ-3 ಬಾಹ್ಯಾಕಾಶ ನೌಕೆಯು ಅಕ್ಟೋಬರ್ 1959 ರಲ್ಲಿ ಚಂದ್ರನ ಮೇಲ್ಮೈನ ಚಿತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ರವಾನಿಸಿತ್ತು. ಲೂನಾ-25 ಮಿಷನ್ ಚಂದ್ರನ ಪರಿಶೋಧನೆಯ ಈ ಪರಂಪರೆಯನ್ನು ಮುಂದುವರಿಸಿದೆ.
ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ (IKI RAS)ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ STS-L ದೂರದರ್ಶನ ಸಂಕೀರ್ಣ ಬಳಸಿಕೊಂಡು ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್‌ ಆಗಲಿದೆ ಎಂದು ತಿಳಿಸಲಾಗಿದೆ. ಲೂನಾ-25 ಉಡಾವಣೆಗೊಂಡ ಕೆಲವೇ ದಿನಗಳಲ್ಲಿ ಚಂದ್ರನ ಕಕ್ಷೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!