ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ತಣಿಸಂದ್ರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ತಾಯ್ಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಆರ್‌ವಿಕೆ ಮಂಗಳೂರು ಶಾಲೆ ವಿಶೇಷ ಸಾಧನೆ ದಾಖಲಿಸಿದೆ.
ಇಲ್ಲಿನ ವಿದ್ಯಾರ್ಥಿಗಳಾದ ಎನ್. ಶಿವ ಭಟ್ ಪ್ರಥಮ ಸ್ಥಾನ ಹಾಗೂ ಎನ್. ಸ್ತುತಿ ಭಟ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕ್ರೀಡಾ ಸಾಧನೆ ತೋರಿದ ಈ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಎನ್. ಶಿವ ಭಟ್ ಹಾಗೂ ಎನ್. ಸ್ತುತಿ ಬಂಟ್ವಾಳ ತಾಲೂಕಿನ ಮಂಚಿ ನವನೂಜಿಬೈಲು ಎನ್. ವಸಿಷ್ಠ ಭಟ್ ಹಾಗೂ ಶುಭ ದಂಪತಿಯ ಮಕ್ಕಳಾಗಿದ್ದಾರೆ.