September 3, 2026
Thursday, September 3, 2026
spot_img

ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಹುದ್ದೆ ತ್ಯಜಿಸಿದ ರಯಾನ್: KKRನಿಂದ ಭರ್ಜರಿ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ಪ್ರವಾಸದ ಮುಕ್ತಾಯದ ಬೆನ್ನಲ್ಲೇ ಭಾರತೀಯ ಪುರುಷರ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಸಿಸಿಐ ಜತೆಗಿನ ದ್ವಿವರ್ಷ ಒಪ್ಪಂದದ ಅವಧಿ ಮುಗಿದ ನಂತರ, ಒಪ್ಪಂದವನ್ನು ಮುಂದುವರಿಸದಿರಲು ಅವರು ತೀರ್ಮಾನಿಸಿದ್ದಾರೆ.

ಕೆಕೆಆರ್‌ನಿಂದ ಪ್ರಮುಖ ಹುದ್ದೆಯ ಆಫರ್

ಮುಂಬರುವ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಪ್ರಮುಖ ತರಬೇತುದಾರ ಜವಾಬ್ದಾರಿ ನಿರ್ವಹಿಸಲು ರಯಾನ್ ಸಜ್ಜಾಗಿದ್ದಾರೆ. ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರು, ರಾಷ್ಟ್ರೀಯ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.

ಕೆಕೆಆರ್ ಜತೆಗಿನ ಹಳೆಯ ನಂಟು

ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಮತ್ತು 2014ರಲ್ಲಿ ಚಾಂಪಿಯನ್ ಆದಾಗ ರಯಾನ್ ಪ್ರಮುಖ ಆಟಗಾರರಾಗಿದ್ದರು. ತದನಂತರ 2024ರಲ್ಲಿ ಫೀಲ್ಡಿಂಗ್ ಕೋಚ್ ಆಗಿಯೂ ಫ್ರಾಂಚೈಸಿಯ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಂಭೀರ್ ಅವರ ತಂತ್ರಗಾರಿಕೆಗಳನ್ನು ಮೈದಾನದಲ್ಲಿ ಯಶಸ್ವಿಯಾಗಿ ಜಾರಿಗೆ ತರುತ್ತಿದ್ದ ಇವರು, ಇದೀಗ ಮತ್ತೆ ತಮ್ಮ ಹಳೆಯ ಕೆಕೆಆರ್ ಬಳಗ ಸೇರಿಕೊಳ್ಳಲು ನಿರ್ಧರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !