Tuesday, December 30, 2025

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡಕ್ಕೆ ಮತ್ತಿಬ್ಬರು ಅಧಿಕಾರಿಗಳ ನೇಮಕಕ್ಕೆ ಕೋರ್ಟ್ ಅನುಮತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ ಇಬ್ಬರು ಅಧಿಕಾರಿಗಳನ್ನು ಸೇರಿಸಿಕೊಳ್ಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ.

ತನಿಖಾ ತಂಡಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್‌ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಸೇರಿಸಬೇಕೆಂದು ಕೋರಿ ಎಸ್‌ಐಟಿ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಜಿಯಾದ್ ರೆಹಮಾನ್ ಎಎ ಮತ್ತು ನ್ಯಾ. ಎಂ.ಬಿ ಸ್ನೇಹಲತಾ ಅವರನ್ನೊಳಗೊಂಡ ರಜಾ ಪೀಠವು ಪುರಸ್ಕರಿದೆ.

ವರದಿಯನ್ನು ಪರಿಗಣಿಸಿದ ನಂತರ, ಇಬ್ಬರ ಅಧಿಕಾರಿಗಳ ಸೇರ್ಪಡೆಗೆ ಅನುಮತಿ ನೀಡಬಹುದು ಎಂದು ಭಾವಿಸುತ್ತೇವೆ ಎಂದು ಪೀಠ ಮೌಖಿಕವಾಗಿ ಆದೇಶಿಸಿದೆ.

ಈ ಹಿಂದೆ ನ್ಯಾಯಾಲಯವು ಎಸ್‌ಐಟಿಗೆ ಆರು ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿ, ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವಂತೆ ತಿಳಿಸಿತ್ತು.

error: Content is protected !!