ಶಬರಿಮಲೆಯ ಆದಾಯಕ್ಕೆ ಪೆಟ್ಟು: ಹಣಗಳಿಕೆಯಲ್ಲಿ ಭಾರಿ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆಯಲ್ಲಿ ಅಪಾರ ಪ್ರಮಾಣದಲ್ಲಿ ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದು, ಆದ್ರೆ ಆದಾಯದಲ್ಲಿ ಭಾರಿ ಕುಂಠಿತವಾಗಿದೆ.

ಜನಸಂದಣಿ ನಿಯಂತ್ರಿಸುವಲ್ಲಿ ಸಮಸ್ಯೆ, ಅವ್ಯವಸ್ಥೆಗಳು ಮತ್ತು ಮಂಡಲ ಸೀಸನ್​ ಆರಂಭದಲ್ಲೇ ಮಳೆಯ ಹೊಡೆತದಿಂದ ಶಬರಿಮಲೆ ಆದಾಯಕ್ಕೆ ಕತ್ತರಿ ಬಿದ್ದಿದೆ.

ಮಂಡಲ ಯಾತ್ರೆಯು 28 ದಿನ ಪೂರೈಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬರೋಬ್ಬರಿ 20 ಕೋಟಿ ರೂ. ಆದಾಯ ನಷ್ಟವಾಗಿದೆ.

ಸದ್ಯ ಶಬರಿಮಲೆಯಲ್ಲಿ ಒಂದೂವರೆ ಲಕ್ಷ ಯಾತ್ರಿಗಳಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಪ್ರಮಾಣವಾಗಿದ್ದು, ನಾಣ್ಯದ ಆದಾಯ ಮತ್ತು ಅಪ್ಪಂ ಹಾಗೂ ಅರವಣ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇಲ್ಲಿಯವರೆಗೆ 134.44 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಇದೇ ಸಮಯಕ್ಕೆ 154.77 ಕೋಟಿ ರೂ. ಸಂಗ್ರಹವಾಗಿತ್ತು.

ಇದರ ಜೊತೆಗೆ ಭಕ್ತಾದಿಗಳ ಪ್ರಮಾಣದಲ್ಲಿ ಭಾರಿ ಇಳಿಕೆಗೆ ಮಿಚೌಂಗ್​ ಸೈಕ್ಲೋನ್​ನಿಂದ ಚೆನ್ನೈನಲ್ಲಿ ಸೃಷ್ಟಿಯಾದ ಪ್ರವಾಹವೇ ಕಾರಣ ಎಂದು ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿ ಕಾರಣ ನೀಡಿದೆ. ಕೆಲ ದಿನಗಳವರೆಗೆ ಭಾರಿ ಮಳೆ ಇದ್ದಿದ್ದರಿಂದ ಭಕ್ತರ ಸಂಖ್ಯೆ ಇಳಿಕೆಯಾಗಿದೆ ಎಂದಿದೆ.

ಅದೇ ರೀತಿ ಕಳೆದ ವಾರವಷ್ಟೇ ಜನ ದಟ್ಟಣೆಯಿಂದ ಯಾತ್ರಾರ್ಥಿಗಳು ಶಬರಿಮಲೆಯಲ್ಲಿ ಪರದಾಡಿದಾರು. ಊಟ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತುಂಬಾ ಕಷ್ಟಗಳನ್ನು ಅನುಭವಿಸಿದರು. ಜನದಟ್ಟಣೆಯಲ್ಲಿ ತನ್ನ ತಂದೆಗಾಗಿ ಹುಡುಕುತ್ತಾ, ಪೊಲೀಸ್​ ಅಧಿಕಾರಿಯೊಬ್ಬರ ಮುಂದೆ ಪುಟ್ಟ ಬಾಲಕನೊಬ್ಬ ತನ್ನ ತಂದೆಗಾಗಿ ಕೈಮುಗಿದ ದೃಶ್ಯ ಎಲ್ಲರ ಹೃದಯಸ್ಪರ್ಶಿಸಿದ್ದಲ್ಲದೆ, ಶಬರಿಮಲೆಯ ಅವ್ಯವಸ್ಥೆಯನ್ನು ಹೊರಗೆಳೆಯಿತು.

ಅಲ್ಲಿನ ಅವ್ಯವಸ್ಥೆಯನ್ನು ಕಂಡು ಕೇರಳ ಹಕೋರ್ಟ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಘಟನೆಯ ಬಳಿಕ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಅಸಲಿ ಸಂಗತಿಯಾಗಿದೆ.

ಅನೇಕ ಭಕ್ತರು ಹದಿನೆಂಟು ಮೆಟ್ಟಿಲನ್ನು ಏರಲಾಗದೇ ಪಂದಳಂನಲ್ಲಿ ತುಪ್ಪದ ಅಭಿಷೇಕವನ್ನು ಮಾಡಿ ದೇವರ ದರ್ಶನವಿಲ್ಲದೆ, ನೋವಿನಿಂದಲೇ ಹಿಂತಿರುಗಿದರು. ಇದನೆಲ್ಲ ನೋಡಿದ ಹೈಕೋರ್ಟ್​ ಭಕ್ತರ ಸಂಖ್ಯೆ ಒಂದು ದಿನಕ್ಕೆ 90 ಸಾವಿರ ಮೀರಬಾರದು ಎಂದು ಆದೇಶ ಹೊರಡಿಸಿದೆ.

ಮಂಡಲ ಅವಧಿ ಅರ್ಧ ಮುಗಿದಿದ್ದು, ಅಪಾರ ಜನಸ್ತೋಮವು ಸಹ ಕಡಿಮೆಯಾಗುವ ಹಂತಕ್ಕೆ ಬಂದಿದೆ. ಆದರೆ, ಈ ಬಾರಿ 80,000ಕ್ಕೆ ನಿಗದಿಪಡಿಸಿದ ವರ್ಚುವಲ್ ಕ್ಯೂ ಬುಕಿಂಗ್ ಮತ್ತು 10,000 ರೂ.ಗೆ ಸ್ಪಾಟ್ ಬುಕಿಂಗ್ ಮಾಡುವುದರಿಂದ ಆದಾಯ ನಷ್ಟವಾಗುತ್ತದೆ ಎಂದು ದೇವಸ್ವಂ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಯಾತ್ರಿಗಳ ಸಂಖ್ಯೆ
ಈ ವರ್ಷ 28 ದಿನಗಳ ನಂತರ: 17,56,730
ಕಳೆದ ವರ್ಷ: 19, 09,241
28 ದಿನಗಳ ಆದಾಯ (ಬ್ರಾಕೆಟ್​ನಲ್ಲಿರುವುದು ಕಳೆದ ವರ್ಷದ ಆದಾಯ)
ಅಪ್ಪಂ: 8,99,05,545 (9,43,54,875)
ಹುಂಡಿ ಕಾಣಿಕೆ: 61,91,32,020 (73,75,46,670)
ದರ್ಶನ: 41,80,66,720 (46,45,85,520)
ವಸತಿ (ಆನ್​ಲೈನ್​​): 34,16,425 (33,92,050)
ಆಫರಿಂಗ್​ (ಆನ್​ಲೈನ್​) : 71,46,565 (1,14,36,17)
ಆಹಾರ ದೇಣಿಗೆ: 1,14,45,455, (1,20,71,97)
ಒಟ್ಟು ಆದಾಯ: 134,44,90,495 (154,77,97,005)
ಕಳೆದ ವರ್ಷ ಭಕ್ತರ ಸಂಖ್ಯೆ: 65 ಲಕ್ಷ
ಕಳೆದ ವರ್ಷದ ಆದಾಯ: 251 ಕೋಟಿ ರೂ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!