ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಇಂದು ಸರ್ಕಾರದ ಸಾಧನಾ ಸಮಾವೇಶದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ವೇದಿಗೆ ಸಜ್ಜಾಗಿದೆ.
ಮಹಾರಾಜ ಕಾಲೇಜು ಆವರಣದಲ್ಲಿ 600 ಅಡಿ ಉದ್ದದ ವಿಶೇಷ ರ‍್ಯಾಂಪ್ ಸ್ಟೇಜ್ ಸಿದ್ಧವಾಗಿದ್ದು, ಸಭಾಂಗಣದ ಮಧ್ಯದಿಂದ ಸಿಎಂ ಎಂಟ್ರಿ ಕೊಡಲಿದ್ದಾರೆ. ಜನರತ್ತ ಕೈ ಬೀಸುತ್ತಾ ಮೈದಾನದ ಮಧ್ಯ ಭಾಗವೇ ವಾಕ್ ಮಾಡುತ್ತಾ ಸಿಎಂ ವೇದಿಕೆಗೆ ಬರಲಿದ್ದಾರೆ.
ಸಮಾವೇಶಕ್ಕೆ ಹಾಕಿರುವ ಪ್ರತಿಯೊಂದು ಚೇರ್‌ನ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಇಡಲಾಗಿದೆ. ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ಕುಳಿತುಕೊಳ್ಳುವ ಪ್ರತಿಯೊಂದು ಚೇರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೊ ಇಡಲಾಗಿದೆ. ಸಿಎಂ ವೇದಿಕೆಗೆ ಬರುತ್ತಿದಂತೆ ಫೋಟೊ ಎತ್ತಿ ಹಿಡಿದು ತೋರಿಸಬೇಕು ಎನ್ನುವುದು ಪ್ಲ್ಯಾನ್ ಆಗಿದೆ.