ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ದರ್ಶನ್ ಜೈಲು ಸೇರಿದ್ದಾರೆ. ಕನ್ನಡ ಚಿತ್ರರಂಗದ ನಟರು, ದರ್ಶನ್ ಆಪ್ತರು ಜೈಲಿನ ಬಳಿ ಬಂದು ದರ್ಶನ್ ಭೇಟಿ ಮಾಡಿದ್ದಾರೆ.
ಇದೀಗ ದರ್ಶನ್ ಭೇಟಿಗೆ ಸಾಧುಕೋಕಿಲ ಆಗಮಿಸಿದ್ದು, ದರ್ಶನ್ ಭೇಟಿಗೆ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ನಟ ಸಾಧುಕೋಕಿಲ ಉತ್ತರ ನೀಡಿದ್ದು, ನಾನು ಇಂದು ಭೇಟಿ ಮಾಡಿದರೆ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ ಎಂದು ಮಾತನಾಡಿದ್ದಾರೆ.