June 29, 2026
Monday, June 29, 2026
spot_img

ತೈಮೂರ್ ಜಾಣ್ಮೆಗೆ ಸೈಫ್ ಫುಲ್ ಫಿದಾ: ಧರ್ಮದ ಬಗ್ಗೆ ಸ್ಟಾರ್ ಕಿಡ್ ಕೊಟ್ಟ ಉತ್ತರವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ ಮಕ್ಕಳಾದ ತೈಮೂರ್ ಹಾಗೂ ಜೆಹ್‌ನನ್ನು ಮುಕ್ತ ಮನೋಭಾವದೊಂದಿಗೆ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೈಫ್, ತಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ನೀಡುತ್ತಿರುವ ಶಿಕ್ಷಣವನ್ನು ಹಂಚಿಕೊಂಡಿದ್ದಾರೆ.

ದೇವರು ಒಬ್ಬನೇ, ಹೆಸರು ಹಲವು:

“ನಾನು ನನ್ನ ಮಕ್ಕಳಿಗೆ ದೇವರು ಒಬ್ಬನೇ, ಆದರೆ ಅವನಿಗೆ ಹಲವು ಹೆಸರುಗಳಿವೆ ಎಂದು ಹೇಳಿಕೊಡುತ್ತೇನೆ” ಎಂದು ಸೈಫ್ ತಿಳಿಸಿದ್ದಾರೆ. ತಮಗೆ ತಾಯಿ ಶರ್ಮಿಳಾ ಟಾಗೋರ್ ಕಲಿಸಿದ ಈ ಸರಳ ಪಾಠವನ್ನೇ ಈಗ ಮಕ್ಕಳಿಗೆ ನೀಡುತ್ತಿರುವುದಾಗಿ, ಇತರೆ ಮನುಷ್ಯರ ಕಡೆಗೆ ಪ್ರೀತಿ ಮತ್ತು ಕ್ಷಮಾಪಣೆ ತೋರುವುದೇ ನಿಜವಾದ ಧರ್ಮ ಎಂದು ಅವರು ವಿವರಿಸಿದ್ದಾರೆ. ಕ್ರಿಶ್ಚಿಯನ್ ಶಾಲೆಯಲ್ಲಿ ಓದಿದ ಸೈಫ್, ತಮ್ಮ ಮನೆಯಲ್ಲಿ ದೀಪಾವಳಿಯಷ್ಟೇ ಸಡಗರದಿಂದ ಕ್ರಿಸ್‌ಮಸ್ ಕೂಡ ಆಚರಿಸಲಾಗುತ್ತದೆ ಎಂದಿದ್ದಾರೆ.

ತೈಮೂರ್ ನೀಡಿದ ಜಾಣ್ಮೆಯ ಉತ್ತರ:

ಇದೇ ವೇಳೆ ಸೈಫ್ ತಮ್ಮ 9 ವರ್ಷದ ಮಗ ತೈಮೂರ್ ಜೊತೆಗಿನ ಸಂಭಾಷಣೆಯನ್ನು ನೆನಪಿಸಿಕೊಂಡರು. “ನಾನು ತೈಮೂರ್‌ಗೆ ‘ಧರ್ಮ ಮತ್ತು ಮೆಥಡಾಲಜಿ (Methodology)’ ನಡುವಿನ ವ್ಯತ್ಯಾಸ ಕೇಳಿದ್ದೆ. ಅದಕ್ಕೆ ತೈಮೂರ್, ‘ಧರ್ಮದಲ್ಲಿ ನಾವು ಪ್ರಾರ್ಥನೆ ಮಾಡುತ್ತೇವೆ, ಆದರೆ ಮೆಥಡಾಲಜಿಯಲ್ಲಿ ಪ್ರಾರ್ಥನೆ ಮಾಡುವುದಿಲ್ಲ’ ಎಂದು ಉತ್ತರಿಸಿದ. ಆತನ ಈ ಜಾಣ್ಮೆಯ ಉತ್ತರ ನನಗೆ ಹೆಮ್ಮೆ ತಂದಿದೆ” ಎಂದು ಸೈಫ್ ಅಲಿ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !