ಅದಿರು ಸಾಗಾಟ ಕೇಸ್​ನಲ್ಲಿ ಸೈಲ್​ಗೆ ಶಿಕ್ಷೆ: ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಕೇಸ್​ನಲ್ಲಿ ಕಾಂಗ್ರೆಸ್​ ಶಾಸಕ ಸತೀಶ್ ಸೈಲ್​ಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

ಇದೀಗ ಈ ಪ್ರಕರಣವನ್ನು ಮೊದಲು ಬಯಲಿಗೆಳೆದಿದ್ದ ಅಂದಿನ ಕರ್ನಾಟಕ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದು, ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ತೀರ್ಪಿನಿಂದ ನನಗೆ ಬಹಳ ಖುಷಿಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ತೋರಿಸುತ್ತದೆ. ಅಕ್ರಮ ಅದಿರು ಸಾಗಣೆ ಕೇಸ್​ನಲ್ಲಿ ಶಿಕ್ಷೆಯಾಗಿದ್ದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆ ವೇಳೆ ಅಡೆತಡೆ ಎದುರಾಗಿತ್ತು. ನನ್ನ ಜೊತೆ ಕೆಲಸ ಮಾಡಿದ ಅಧಿಕಾರಿಗಳಿಗೆ ಸಂತೃಪ್ತಿ ಸಿಕ್ಕಂತಾಗುತ್ತೆ. ಶಿಕ್ಷೆಯಾಗಿರುವುದರಿಂದ ನ್ಯಾಯಾಂಗದ ಶಕ್ತಿ ತೋರಿಸಿದಂತಾಗುತ್ತೆ. ಅಕ್ರಮದಲ್ಲಿ ಇನ್ನೂ ಹಲವರು ಇದ್ದಾರೆ, ಅವರಿಗೂ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!