ಸಲೀಂ ದುರಾನಿ ಕ್ರಿಕೆಟ್ ದಂತಕಥೆ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಭಾರತದ ಮಾಜಿ ಆಲ್‌ರೌಂಡರ್ ಸಲೀಂ ದುರಾನಿ ಅವರು ಇಂದು ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತಂತೆ ಪ್ರಧಾನಿಗಳು ಸರಣಿ ಟ್ವೀಟ್ ಮಾಡಿದ್ದು, ಸಲೀಂ ದುರಾನಿ ಜಿ ಅವರು ಕ್ರಿಕೆಟ್ ದಂತಕಥೆ, ಸ್ವತಃ ಒಂದು ಸಂಸ್ಥೆ. ಅವರು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಉದಯಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಮೈದಾನದ ಒಳಗೆ ಮತ್ತು ಹೊರಗೆ ಅವರು ತಮ್ಮ ಶೈಲಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನದಿಂದ ನೋವಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಮಹಾನ್ ಸಲೀಂ ದುರಾನಿ ಅವರೊಂದಿಗೆ ವಿವಿಧ ಸಂದರ್ಭಗಳಲ್ಲಿ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತು. ಅಂತಹ ಒಂದು ಸಂದರ್ಭವೆಂದರೆ ಜನವರಿ 2004 ರಲ್ಲಿ ಜಾಮ್ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೇಷ್ಠ ಕ್ರಿಕೆಟಿಗ ವಿನೂ ಮಂಕಡ್ ಜಿ ಅವರ ಪ್ರತಿಮೆಯನ್ನು ಉದ್ಘಾಟನೆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಸಲೀಂ ದುರಾನಿ ಜಿ ಗುಜರಾತ್‌ನೊಂದಿಗೆ ಬಹಳ ಹಳೆಯ ಮತ್ತು ಬಲವಾದ ಒಡನಾಟವನ್ನು ಹೊಂದಿದ್ದರು. ಸೌರಾಷ್ಟ್ರ ಮತ್ತು ಗುಜರಾತ್ ಪರ ಕೆಲವು ವರ್ಷಗಳ ಕಾಲ ಆಡಿದ್ದರು. ಗುಜರಾತನ್ನೂ ತವರುಮನೆಯನ್ನಾಗಿ ಮಾಡಿಕೊಂಡರು. ನಾನು ಅವರ ಬಹುಮುಖಿ ವ್ಯಕ್ತಿತ್ವದಿಂದ ಆಳವಾಗಿ ಪ್ರಭಾವಿತನಾಗಿದ್ದೇನೆ ಎಂದು ಪ್ರಧಾನಿ ಬರೆದಿದ್ದಾರೆ.

1960 ರ ದಶಕದ ಸ್ಟೈಲಿಶ್ ಇಂಡಿಯಾ ಕ್ರಿಕೆಟಿಗರಾದ ದುರಾನಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ಸಲೀಂ ದುರಾನಿ ಅವರು ಈ ವರ್ಷದ ಜನವರಿಯಲ್ಲಿ ನೆಲಕ್ಕೆ ಬಿದ್ದ ಪರಿಣಾಮ ತೊಡೆಯ ಮೂಳೆ ಮುರಿತದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು. ಇಂದು ಗುಜರಾತ್‌ನ ಜಾಮ್‌ನಗರದಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!