ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್‌ಗೆ ಯಶಸ್ಸು ತಂದುಕೊಟ್ಟ ಫಿಲಂ ಭಜರಂಗಿ ಭಾಯಿಜಾನ್. ಈ ಸಿನಿಮಾ ಸಲ್ಲು ಕರಿಯರ್‌ನಲ್ಲಿ ಮನಮುಟ್ಟುವ ಸಿನಿಮಾ ಎಂದೇ ಹೇಳಲಾಗಿತ್ತು. ಸಲ್ಮಾನ್ ಅಭಿನಯ ಜನರ ಮನಸ್ಸನ್ನು ಮುಟ್ಟಿತ್ತು. ಸಲ್ಮಾನ್ ಈ ಸಿನಿಮಾಗೆ ಫಸ್ಟ್ ಚಾಯ್ಸ್ ಅಲ್ಲ ಅಂದ್ರೆ ನಂಬ್ತೀರಾ? ಖಂಡಿತಾ ಹೌದು, ಸಲ್ಮಾನ್ ಬದಲು ಈ ಸಿನಿಮಾ ಮಾಡೋದಕ್ಕೆ ಇನ್ನೊಬ್ಬ ನಟನಿಗೆ ಆಫರ್ ನೀಡಲಾಗಿತ್ತಂತೆ.
ಕಥೆ ಬರೆದ ವಿಜಯೇಂದ್ರ ಪ್ರಸಾದ್ ಅವರು ಮೊದಲು ಆಮಿರ್ ಖಾನ್ ಬಳಿ ಬಂದಿದ್ದರು. ಆದರೆ, ಇದನ್ನು ಅವರು ಮಾಡಲು ಒಪ್ಪಿಲ್ಲ ಎನ್ನಲಾಗಿದೆ. ಭಜರಂಗಿ ಭಾಯಿಜಾನ್ ಕಥೆ ನನಗೆ ಮೊದಲು ಬಂದಿತ್ತು. ಕಥೆ ಬರಹಗಾರ ವಿಜಯೇಂದ್ರ ಪ್ರಸಾದ್ ಅವರಿಗೆ ನಾನು ಮಾಡಲ್ಲ ಎಂದೆ. ಈ ಕಥೆ ನನಗಿಂತ ಸಲ್ಮಾನ್ ಖಾನ್ ಹೆಚ್ಚು ಹೊಂದುತ್ತದೆ ಎನಿಸಿತು. ಅವರ ಬಳಿ ಹೋಗುವಂತೆ ಹೇಳಿದೆ. ನನಗೆ ಸ್ಕ್ರಿಪ್ಟ್ ಇಷ್ಟ ಆಗಿತ್ತು. ಆದರೆ, ನನಗೆ ಹೊಂದುತ್ತಿರಲಿಲ್ಲ. ಅವರು ಕಬೀರ್ ಬಳಿ ಹೋದರು. ಕಬೀರ್ ಅವರು ಸಲ್ಮಾನ್ ಖಾನ್ ಬಳಿ ಹೋದರು. ಆ ಬಳಿಕ ಸಿನಿಮಾ ಆಯಿತು. ಸ್ಕ್ರಿಪ್ಟ್ ಓದಿದಾಗ ಅದು ನನ್ನ ಮೊದಲ ರಿಯಾಕ್ಷನ್ ಆಗಿತ್ತು’ ಎಂದಿದ್ದಾರೆ ಆಮಿರ್ ಖಾನ್.