ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಈ ಮಧ್ಯೆ ಇತ್ತೀಚೆಗಷ್ಟೇ ಪೂಜಾ ಹೆಗ್ಡೆ ಸಹೋದರನ ಮದುವೆ ನಡೆದಿದ್ದು, ಇದರಲ್ಲಿಯೂ ಸಲ್ಮಾನ್ ಕಾಣಿಸಿಕೊಂಡಿದ್ದಾರೆ.
ಮುಂಬೈನಿಂದ ಮಂಗಳೂರಿನವರೆಗೆ ಬಂದು ಮದುವೆ ಅಟೆಂಡ್ ಮಾಡಿ ಹೋಗಿರೋ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಇಷ್ಟೇ ಅಲ್ಲದೆ ಮದುವೆಯ ಇತರ ಕಾರ್ಯಕ್ರಮಗಳಲ್ಲೂ ಸಲ್ಮಾನ್ ಭಾಗಿಯಾಗಿದ್ದಾರೆ. ಪೂಜಾ ಹೆಗ್ಡೆ ಜತೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದು, ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ.