ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಡೆಂಗ್ಯೂ ಜ್ವರ ಬಂದಿದ್ದು,ಹೀಗಾಗಿ ಕೆಲವು ದಿನಗಳಿಂದ ಸಲ್ಮಾನ್ ಖಾನ್ ಆರೋಗ್ಯ ಸರಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. .
ಇನ್ನು ಅನಾರೋಗ್ಯದ ಕಾರಣ ಅವರು ಬಿಗ್ಬಾಸ್ನಿಂದ ಸಣ್ಣ ವಿರಾಮವನ್ನು ಪಡೆದಿದ್ದಾರೆ.ಸಲ್ಲು ಬದಲಾಗಿ ನಿರ್ಮಾಪಕ ಕರಣ್ ಜೋಹರ್ ಬಿಗ್ಬಾಸ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
ಸಲ್ಮಾನ್ ಖಾನ್ ಅನಾರೋಗ್ಯದ ಬಗ್ಗೆ ತಿಳಿದುಕೊಂಡ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಲ್ಲು ಭಾಯ್ ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.