ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಸದ್ಯ ಒಂದೆಡೆ ಸಿನಿಮಾ, ಇನ್ನೊಂದೆಡೆ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಸದ್ಯ ಟೈಗರ್ 3 ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕತ್ರಿನಾ ಕೈಫ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ.
ಸದ್ಯ ಟೈಗರ್ 3 ಚಿತ್ರೀಕರಣ ಅಂತಿಮ ಹಂತದಲ್ಲಿದೆ. ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ನಡುವೆ ಸಲ್ಮಾನ್ ಖಾನ್ ಅವರ ಹೊಸ ಲುಕ್ ವೈರಲ್ ಆಗಿದೆ. ನಿನ್ನೆ ಮುಂಬೈನಲ್ಲಿ ನಡೆದ ಖಾಸಗಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಅವರನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸಲ್ಮಾನ್ ತಲೆ ಗುಂಡು ಬಾಸ್ ಹೇರ್ಸ್ಟೈಲ್ನಲ್ಲಿ ಮಿಂಚಿದ್ದಾರೆ.
ಸಲ್ಮಾನ್ ಖಾನ್ ಗುಂಡು ಬಾಸ್ ಸ್ಟೈಲ್ನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಸಲ್ಮಾನ್ ಈ ಕೇಶ ವಿನ್ಯಾಸ ಮಾಡಿಸಿದ್ದು ಯಾಕೆ ಎಂಬ ಅನುಮಾನವನ್ನು ನೆಟ್ಟಿಗರು ಹಾಗೂ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಟೈಗರ್ 3ಗಾಗಿ ಸಲ್ಮಾನ್ ಶೇವ್ ಮಾಡಿಸಿಕೊಂಡಿದ್ದರೆ, ಜವಾನ್ ನಲ್ಲಿ ಶಾರುಖ್ ಶೇವ್ ಮಾಡಿಕೊಂಡಿದ್ದರು ಸಲ್ಮಾನ್ ಕೂಡ ಆ ರೀತಿ ಪ್ಲಾನ್ ಮಾಡಿದ್ದಾರಾ ಎಂಬ ಕುತೂಹಲವೂ ಮೂಡಿದೆ.
How is megastar Salman Khan's new look?
||#Tiger3 | #SalmanKhan || pic.twitter.com/s1bJRcPodU
— Manobala Vijayabalan (@ManobalaV) August 20, 2023