‘ಆಪರೇಷನ್​ ಸಿಂದೂರ’ ಕುರಿತು ಸಲ್ಮಾನ್ ಖಾನ್ ಟ್ವೀಟ್: ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಆಪರೇಷನ್​ ಸಿಂದೂರ’ ಆರಂಭವಾಗಿ ಇಷ್ಟು ದಿನವಾದರೂ ಬಾಲಿವುಡ್​ನ ಖಾನ್​ ನಟರು ಈ ಕುರಿತು ಬಾಯಿ ಬಿಚ್ಚಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಇವರನ್ನು ಟ್ರೋಲ್​ ಮಾಡುತ್ತಿದ್ದರೂ ಪಾಕಿಸ್ತಾನದ ವಿರುದ್ಧ ಒಂದು ಮಾತೂ ಆಡುತ್ತಿಲ್ಲ.

ಇದರ ನಡುವೆಯೇ ಸಲ್ಮಾನ್ ಖಾನ್​ ಈಗ ಎಲ್ಲಿ ಅಭಿಮಾನಿಗಳು ತಮ್ಮ ವಿರುದ್ಧ ತಿರುಗಿ ಬೀಳುತ್ತಾರೋ ಎನ್ನುವ ಕಾರಣಕ್ಕೆ, ಒಂದು ಟ್ವೀಟ್​ ಮಾಡಿದ್ದು, ಈಗ ಅದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಸಲ್ಮಾನ್ ಖಾನ್ ‘ಕದನವಿರಾಮ ಘೋಷಣೆಯಾಗಿದ್ದಕ್ಕೆ ಥ್ಯಾಂಕ್​ ಗಾಡ್​’ ಎಂದಿದ್ದಾರೆ ಅಷ್ಟೇ. ಈ ಟ್ವೀಟ್ ನೋಡಿ ಜನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದೂ ಬಳಿಕ ಅವರು ಈ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!