ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದ ನಂತರ, ದಿನೇಶ್ ಕಾರ್ತಿಕ್ ಅವರು ವಿರಾಟ್ ಕೊಹ್ಲಿ, ರಜತ್ ಪಾಟಿದರ್, ದೇವದತ್ ಪಡಿಕ್ಕಲ್ ಮತ್ತು ಜೇಕಬ್ ಡಫಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು.
ಇದಕ್ಕೆ ತಮಾಷೆಯಾಗಿ ಕಮೆಂಟ್ ಮಾಡಿದ್ದ ಫಿಲ್ ಸಾಲ್ಟ್, “ಕ್ಯಾಚ್ ಮಾಸ್ಟರ್ಮೈಂಡ್ ಬಗ್ಗೆ ಏನೂ ಇಲ್ವಾ? ನಾಚಿಕೆಯಾಗಬೇಕು” ಎಂದು ಕಾಲೆಳೆದಿದ್ದರು.
https://www.instagram.com/reel/DWdlwMskrec/?utm_source=ig_web_copy_link
ಸಾಲ್ಟ್ ಅವರ ಈ ಕಿಚಾಯಿಸುವಿಕೆಗೆ ಡಿಕೆ ಬೆಂಕಿ ಪೋಸ್ಟ್ ಮೂಲಕವೇ ಉತ್ತರಿಸಿದ್ದಾರೆ. ಫಿಲ್ ಸಾಲ್ಟ್ ಗಾಳಿಯಲ್ಲಿ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡ ಕಾರ್ತಿಕ್, “Safest hands in town” ಎಂದು ಶ್ಲಾಘಿಸಿದ್ದಾರೆ. ಇದಕ್ಕೆ ಸಾಲ್ಟ್ ಕೂಡ “ಥ್ಯಾಂಕ್ಸ್ ಡಿಕೆ ಭಾಯ್” ಎಂದು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.



