ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಡಿಯೂರಪ್ಪ ಅವರಿಗೆ ಪಕ್ಷ ಸಂಘಟನೆ ಬೇಕಿಲ್ಲ, ತಮ್ಮ ಮಕ್ಕಳು ಉದ್ಧಾರ ಆದರೆ ಸಾಕು ಎನ್ನುವ ಮನೋಭಾವ ಇದೆ ಎಂದು ಮಾಜಿ ಸಚಿವ ಈಶ್ವರಪ್ಪ ಮತ್ತೆ ಹೇಳಿದ್ದಾರೆ.
ಇಡೀ ಪಕ್ಷ ಒಂದು ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗುತ್ತಿದೆ, ಕಾರ್ಯಕರ್ತರ ಮನಸ್ಸಿನ ಭಾವನೆ ಬಗ್ಗೆ ಯಾರಿಗೂ ಯೋಚನೆ ಇಲ್ಲ.
ಬಸನಗೌಡ ಪಾಟೀಲ್ ಯತ್ನಾಳ್, ಸಿಟಿರವಿ ಪಕ್ಷಕ್ಕಾಗಿ ಎಷ್ಟೆಲ್ಲಾ ಬಲಿದಾನ ಮಾಡಿದ್ದಾರೆ. ಆದರೆ ಅವರನ್ಯಾಕೆ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ? ರವಿಗೆ ಲೋಕಸಭಾ ಚುನಾವಣೆಗೂ ಟಿಕೆಟ್ ಕೊಟ್ಟಿಲ್ಲ, ನಾನು ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿದರೆ ಗೆಲುವು ಗ್ಯಾರೆಂಟಿ ಎಂದು ಹೇಳಿದ್ದಾರೆ.
ನಿಮ್ಮದು ಅದೇ ಅವಸ್ಥೆ…. ಕಾರ್ಯಕರ್ತರು ದುಡಿಲಿಕ್ಕೆ ಮಾತ್ರ… ನಿಮ್ಮದು ನಿಮ್ಮ ಮನೆ ಉದ್ದಾರ ಆದ್ರೆ ಸಾಕು ದೇಶ ಏನು ಬೇಕಾದರೂ ಆಗ್ಲಿಲಿ…