ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಸಾಕಷ್ಟು ಚರ್ಚೆಯಲ್ಲಿರುವ ನಟಿಯರಲ್ಲಿ ಸಮಂತಾ ಕೂಡ ಒಬ್ರು. ಒಮ್ಮೆ ಖಾಸಗಿ ಜೀವನದ ಬಗ್ಗೆ ಸುದ್ದಿಯಾಗಿದ್ರೆ, ಮತ್ತೊಮ್ಮೆ ಆರೋಗ್ಯದ ವಿಷಯಕ್ಕೆ ಸುದ್ದಿಯಲ್ಲಿದ್ರು. ಆದ್ರೆ ಈಗ ನಿರ್ಮಾಪಕರಿಗೆ ಹೊಸ ಕಂಡೀಷನ್ ಹಾಕುವ ಮೂಲಕ ಮತ್ತೆ ಚರ್ಚೆಗೆ ಬಂದಿದ್ದಾರೆ.
ಹೌದು! ಇನ್ಮೇಲೆ ತೆಲುಗು ಸಿನಿಮಾಗಳಲ್ಲಿ ನಟಿಸಬೇಕಾದ್ರೆ, ಹೀರೋಗಳಿಗೆ ಕೂಡುವಷ್ಟು ಸಮಾನ ಸಂಭಾವನೆ ಕೊಡಬೇಕಂತೆ. ಇಲ್ಲ ಅಂದ್ರೆ, ಕಥೆ ಎಷ್ಟೇ ಚೆನ್ನಾಗಿದ್ರೂ, ಸಮಂತಾ ಡೇಟ್ಸ್ ಕೊಡೋದಿಲ್ಲವಂತೆ. ಈಗಾಗಲೇ ಕೆಲವು ನಿರ್ಮಾಪಕರ ಜೊತೆ ಮಾತುಕತೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗ್ತಿದೆ.
ಅಷ್ಟೇ ಅಲ್ಲದೆ ತನ್ನ ನಿರ್ಮಾಣ ಸಂಸ್ಥೆಯ ಸಿನಿಮಾಗಳಲ್ಲೂ ನಟ-ನಟಿಯರಿಗೆ ಸಮಾನ ಸಂಭಾವನೆ ನೀಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಮಂತಾ ನಿರ್ಧಾರಕ್ಕೆ ಟಾಲಿವುಡ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ನಿರ್ಮಾಪಕರು ಬೆಂಬಲ ಸೂಚಿಸಿದ್ರೆ, ಇನ್ನು ಕೆಲವರು ಯೋಚನೆಯಲ್ಲಿದ್ದಾರಂತೆ.