ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷ ಬಿಜೆಪಿಯ ಬಿ ಟೀಂ ಎಂದು ಶಿವಸೇನಾ ಉದ್ದವ್ ಠಾಕ್ರೆ ಬಣದ ಶಾಸಕ ಆದಿತ್ಯ ಠಾಕ್ರೆ ಆಕ್ರೋಶ ಹೊರ ಹಾಕಿದ್ದಾರೆ.
ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕವು ಕೆಲವೊಮ್ಮೆ ಬಿಜೆಪಿ ಬಿ-ಟೀಂನಂತೆ ವರ್ತಿಸುತ್ತದೆ. ನಮ್ಮ ಹಿಂದುತ್ವ ಸ್ಪಷ್ಟವಾಗಿದೆ. ನಮ್ಮ ಹಿಂದುತ್ವ ಎಂದರೆ ‘ಹೃದಯ್ ಮೇ ರಾಮ್ ಔರ್ ಹಾಥ್ ಕೋ’ ಕಾಮ್’. ನಮ್ಮ ಹಿಂದುತ್ವ ಎಂದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಎಂದರು.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯನ್ನು (MVA) ಎಸ್‌ಪಿ ತೊರೆದ ಒಂದು ದಿನದ ನಂತರ ಠಾಕ್ರೆಯವರಿಂದ ಈ ಹೇಳಿಕೆ ಪ್ರಕಟವಾಗಿರುವುದು ವಿಶೇಷ.