ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಯೊಸಿಸ್ ಖಾಯಿಲೆಯಿಂದ ಸಮಸ್ಯೆ ಎದುರಿಸಿದ್ದ ಸಮಂತಾ ಮತ್ತೆ ಚಿತ್ರರಂಗದತ್ತ ವಾಪಾಸಾಗಿದ್ದಾರೆ. ಶಾಕುಂತಲಾ ರಿಲೀಸ್‌ಗೆ ಸಮಂತಾ ಎದುರು ನೋಡುತ್ತಿದ್ದು, ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಾಕಷ್ಟು ಪ್ರಮೋಷನ್ ನಂತರ ಸಮಂತಾ ಆರೋಗ್ಯ ಮತ್ತೆ ಕೈಕೊಟ್ಟಿದೆ.
ಕಡೇ ಹಂತದ ಪ್ರಮೋಷನ್ಸ್ ಇನ್ನು ಬಾಕಿ ಇದ್ದಾಗಲೇ ಸಮಂತಾಗೆ ಅನಾರೋಗ್ಯ ಕಾಡಿದ್ದು, ಅಭಿಮಾನಿಗಳಿಗೆ ಬೇಸರವಾಗಿದೆ. ನಾಳೆ ಶಾಕುಂತಲಂ ರಿಲೀಸ್ ಆಗುತ್ತಿದೆ. ಹೀಗಿರುವಾಗ ಸಮಂತಾಗೆ ಜ್ವರ, ಗಂಟಲು ನೋವು ಬಾಧಿಸುತ್ತಿದೆ.
ಈ ಬಗ್ಗೆ ಸ್ವತಃ ಸಮಂತಾ ಹೇಳಿಕೊಂಡಿದ್ದು, ಪ್ರಮೋಷನ್ಸ್ ಇದ್ದಿದ್ದೇ ರೆಸ್ಟ್ ಮಾಡಿ ಎಂದು ಫ್ಯಾನ್ಸ್ ಹೇಳಿದ್ದಾರೆ. ಹೆಚ್ಚು ಸುತ್ತಾಡಿದ್ದೀರಿ ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಇನ್ನಷ್ಟು ಫ್ಯಾನ್ಸ್ ಸಲಹೆ ನೀಡಿದ್ದಾರೆ.